Cocktail ಭಾಷೆ!

Corporate life ನ ಮೊದಲನೇ ದಿನ. Conference room ನಲ್ಲಿ 17 ಜನ freshers. ಅದ್ರಲ್ಲಿ 7 ಜನ ಪರಿಚಯಸ್ತರು. ನನ್ನದೇ ಕಾಲೇಜಿನವರು. ಕನ್ನಡ ಮಾತಾಡೋವವರು :) ಉಳಿದವರು ತಮಿಳು, ತೆಲುಗು, ಬಿಹಾರಿ, ಮಲಯಾಳಿ ಮಾತಾಡೋವವರು. Co-ordinator ಕೂರ್ಗಿ. ಕಾಲೇಜಿನಲ್ಲೂ ಬೇರೆ ಬೇರೆ ಭಾಷೆ ಮಾತಾಡೋ ಜನ ಇರ್ಲಿಲ್ಲ ಅಂತ ಅಲ್ಲ, ಆದರೆ ಅಲ್ಲಿ 80-90% ಜನಕ್ಕೆ ಕನ್ನಡ ಬರ್ತಾ ಇತ್ತು. 70% ಜನ ಮಾತಾಡ್ತಾ ಇದ್ರೂ ಕೂಡ. ಮಂಡಗದ್ದೆ ಇಂದ ಬಂದರೂ England ಇಂದ ಬಂದವರ ಹಾಗೆ ಇರ್ತಾರಲ ;) (ಗೊತ್ತು ಗೊತ್ತು, ನನ್ನನ್ನು ತಮಾಷೆ ಮಾಡ್ತಾ ಇದೀರಲ, ಸಂಪೂರ್ಣ ಲೇಖನ ಕನ್ನಡದಲ್ಲಿ ಬರ್ಯಲ್ಲ ಅಂತ . ಏನ್ ಮಾಡ್ಲಿ? ನಂಗು ಸ್ವಲ್ಪ ಪಶ್ಚಿಮದವರ ಸಂಪರ್ಕ ;) ) Anyways ಇಲ್ಲಿ Scene ಬೇರೆ. ಯಾರೂ england ನವರಲ್ಲ. ಆದರೂ ಕಾಲೇಜಿನಲ್ಲಿ ಬ್ರಿಟೀಷರ ಸಂಪರ್ಕ ಇತ್ತು.ತಮಿಳು ನಾಡು, ಕೇರಳದಲ್ಲಿ ಆಂಗ್ಲರ ಕಾಟ ಸ್ವಲ್ಪ ಕಡಿಮೆ ಅನಿಸುತ್ತೆ, ಅವರಿಗೆ ಅಭ್ಯಾಸ ಇರಲಿಲ್ಲ. ಹಾಗು ಹೀಗೂ ಅಗತ್ಯ ಬಿದ್ದಾಗ ಮಾತಾಡ್ತಾ ಇದ್ವಿ. Team building , ಅದು, ಇದು ಅಂತ ಪಾಪ HR ಗಳು ಹರ ಸಾಹಸಗಳನ್ನ ಮಾಡಿದ್ರು.Session ಮುಗಿದ ಮೇಲೆ ಮರಳಿ ಭಾಷಾ team ಗೆ!


15 ದಿನ ಆದಮೇಲೆ ನಮ್ಮನ್ನ ಕಂಪನಿಯ 3 section ಗಳಿಗೆ ಹಂಚಿದರು. 3 ತಮಿಳರ ಮದ್ಯ ನಾನು ಸಿಕ್ಕಿಬಿದ್ದೆ! ಅವರವರು ತಮಿಳಲ್ಲೇ ಮಾತಾಡೋದು, ಆಚೆ ಈಚೆ Desk ಲಿ ಕೂಡ ತಮಿಳ್ ಲಿ ಜೋಕ್ ನಡಿತಾ ಇರತ್ತೆ. ಜೊತೆಗೆ ನನ್ನ 'flat mate' ಕಮ್ 'colleague' ಕಮ್ 'one of the best friends' ನ ಮಾತೃಭಾಷೆ ಕೂಡ ತಮಿಳು (ಕನ್ನಡ ಚೆನ್ನಾಗೆ ಬರತ್ತೆ ಅಂತ ಇಟ್ಕೋಳಿ) ನನ್ನ ಟೀಮಿಗೆ ಸೇರಿರೋ ಮತ್ತೊಬ್ಬ fresher ಕೂಡ ತಮಿಳು. co-mentor ತಮಿಳು. ಕೆಲೋ ಸಲ ಅವರಿಗೆ ಮರತೇ ಹೋಗತ್ತೆ ನನಗೆ ತಮಿಳು ಬರಲ್ಲ ಅಂತ. ಒಂದೆರಡು ನಿಮಿಷ ಆದಮೇಲೆ ನಾನು ಕಣ್-ಕಣ್ ಬಿಡೋದನ್ನ ನೋಡಿ ಭಾಷೆ change ಮಾಡ್ತಾರೆ.

ತರಕಾರಿ ತರೋದಕ್ಕೆ ಹೋದ್ರು ತಮಿಳು, ಸಾಮಾನ್ ತರೋದಕ್ಕೆ ಹೋದ್ರು ಅಷ್ಟೇ. ಹಾಗಾಗಿ baby steps ಇಡ್ತಾ ಇದೀನಿ. "Hey, Do you have ತಣ್ಣಿ?" , " ಪೋಲಾಮಾ? " ಅಂತ ಒಂದಿಷ್ಟು ಪದಗಳನ್ನ ಕಲಿತು, ಕನ್ನಡ accent ಲಿ english ನ ಒಟ್ಟಿಗೆ ಪ್ರಯೋಗ ಮಾಡ್ತಾ ಇದೀನಿ. ಆಮೇಲೆ ಅವರ ಜೊತೆಗೆ ಸೇರಿ , ನಾನು ನಗಾಡ್ತೀನಿ :)

ನಾವು majority ಲಿ ಇರೋದರಿಂದ, ಮಾತು ಜಾಸ್ತಿ ಆಡೋದರಿಂದ, plus ಕನ್ನಡದಲ್ಲೇ ಹೆಚ್ಚಾಗಿ ಮಾತಾದೊದರಿಂದ, plus BMTC bus, Auto drivers, ಹೀಗೆ ನಮ್ಮದೂ ಈ ಊರಿನಲ್ಲಿ ಸಮಪಾಲು ಇರೋದರಿಂದ, ಅವರ ಕನ್ನಡ ಕಲಿಕೆಯು ನಡಿತಾ ಇದೆ.

ತೆಲುಗು ಸಿನಿಮಾ ಆಗಾಗ್ಗೆ ಸಿದ್ದಾರ್ಥ್ ಗಾಗಿ ನೋಡೋದು, ಕನ್ನಡ, english, ತಮಿಳು ಸೇರಿಸಿ ಆಫೀಸ್ ಲಿ ಮಾತಾಡೋದು, ಅಮ್ಮನ ಹತ್ರ ಸಾಗರ ಹವ್ಯಕ, ಅಪ್ಪ/ತಮ್ಮನ ಹತ್ರ ಕನ್ನಡ, ಹಿಂದಿ ಧಾರವಾಹಿ/reality shows you tube li ನೋಡೋದು , ಹೀಗೆ ಎಲ್ಲ ಸೇರಿ ನನ್ನ ತಲೆ ಚಿತ್ರಾನ್ನ ಆಗಿದೆ. ಮೊನ್ನೆ ಎರಡು ದಿನ ನನ್ನ flat mate ನ ಮೈಸೂರಿನ ಮನೆಗೆ ಹೋಗಿ ಬಂದು, ತಮಿಳಿನಲ್ಲಿ ಯೋಚನೆ ಮಾಡೋದಕ್ಕೂ ಶುರು ಮಾಡಿದ್ದೆ!!

ನನ್ನ observation ಪ್ರಕಾರ, ನಾವು ಕನ್ನಡಿಗರಿಗೆ ಇರೋ ಅಷ್ಟು ಭಾಷೆಗಳ ಮೇಲಿನ exposure ಬೇರೆಯವರಿಗೆ ಕಡಿಮೇನೆ. ಕನ್ನಡ ಹೇಗಿದ್ರು ಮನೇಲಿ ಮಾತಾಡ್ತಾರೆ. ಮಾತೃಭಾಷೆ ಅಲ್ಲ ಅಂದ್ರೆ, ಆಚೆ ಈಚೆ ಮನೆಯವರಿಂದ ಆದ್ರೂ ಬರತ್ತೆ. ಹೆಚ್ಚಾಗಿ English medium ಲಿ ಕಲಿಯೋದರಿಂದ english ಬರತ್ತೆ. ಇಲ್ಲಾ ಅಂದ್ರೆ language ಆಗಿ ಆದ್ರೂ ಶಾಲೆಲಿ ಕಲಿತೇ ಇರ್ತಾರೆ. ರಾಷ್ಟ್ರಭಾಷೆನೂ ಶಾಲೇಲಿ ಕಲಿತಿರ್ತಿವಿ. ಡಿಗ್ರಿ ಲಿ ಉತ್ತರ ಭಾರತದ friends ಇದ್ರೆ ಅದು ಇನ್ನು improve ಆಗಿರತ್ತೆ. ಇಲ್ಲಾ ಅಂದ್ರೆ Shahrukh Khan, Hrithik Roshan, Star plus, Sony ಇದ್ದೆ ಇದ್ಯಲ. ತೆಲುಗು , ತಮಿಳು ಸಿನಿಮಾಗಳು ಕರ್ನಾಟಕದಲ್ಲೂ ಸುಲಭವಾಗಿ ನೋಡೋದಕ್ಕೆ ಸಿಗೊದರಿಂದ ಆಗಾಗ್ಗೆ famous ಆದದ್ದನ್ನಾದರೂ ನೋಡಿ ಬರ್ತಿವಿ. ಮಲಯಾಳಿ ಗುರುತಿಸೋ ಮಟ್ಟಿಗೆ ಅಂತೂ ಬರತ್ತೆ.ಅಲ್ಲಿಗೆ ಸುಮಾರಿಗೆ ಎಲ್ಲಾನು ಆಯ್ತಲ!

ದಕ್ಷಿಣದ ಬೇರೆ ರಾಜ್ಯದ ಜನರು ಇದ್ರಲ್ಲಿ ಸ್ವಲ್ಪ ಹಿಂದೆ ಅನಿಸುತ್ತೆ. ಹಿಂದಿ ಸಿನಿಮಾನ subtitles ಜೊತೆಗೆ ನೋಡೋದನ್ನ ಕೇಳಿ ಆಶ್ಚರ್ಯ ಆಗತ್ತೆ! ಮೊನ್ನೆ ನನ್ನ colleague ಒಬ್ಬ ರಿಕ್ಷಾ ಇಂದ ಇಳಿದು, ಡ್ರೈವರ್ ಹತ್ರ ಚರ್ಚೆ ಮಾಡಿದಾನೆ, ಆಗ ಅವನು "saab, humne aapse pehle hi kaha ta na..." ಅಂದಿದಾನೆ. ಅದಕ್ಕೆ ಈ ಜನ, "I dont know kannada!" ಅಂದನಂತೆ ಮಾರಾಯ! ನೋಡಿದ್ರಾ, ನಾ ಹೇಳಿಲ್ವ, ನಾವೇ better ಅಂತ? ;)

PS: ದಯವಿಟ್ಟು offensive ಆಗಿ ತಗೋಬೇಡಿ, ನನ್ನ ಸುತ್ತ ಮುತ್ತ ನಡಿಯೋದರ observation + rough interpretation ಅಷ್ಟೆ ಇದು .
Btw ippo enakku oru nalla tamil friend irukka :)
ha! ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಪ್ರತಿ ಭಾನುವಾರ ಮಧ್ಯಾಹ್ನ 1:30 ಕ್ಕೆ !

ಬೇಗ ಶುರುಮಾಡೋದಕ್ಕೆ ಬೇರೆ ಕೆಲಸಗಳು ಮುಗಿದಿರೋದಿಲ್ಲ, ಆಮೇಲೆ ಮಾಡೋದಕ್ಕೆ ಹೊಟ್ಟೆ ಬಿಡೋದಿಲ್ಲ ಪ್ಲಸ್ ಲೇಟ್ ಆಗಿ ಹೋದರೆ ಏನೂ ಉಳಿದಿರೋದಿಲ್ಲ. ಹಾಗಾಗಿ sharp 1:30 ಗೆ ಹಾಜರ್! ತರಕಾರಿ ಇಲ್ಲದೆ ಇರೋ ಪಲಾವೋ, ಡಾಲ್ಡ ಹಾಕಿದ Ghee rice ಓ , ಅದೃಷ್ಟ ಚೆನ್ನಾಗಿದ್ದಾರೆ ಬಿಸಿಬೇಳೆಬಾತೋ , ಯಾವುದೋ ಒಂದು. ಕೊಟ್ಟಿದ್ದು ತಟ್ಟೆಗೆ ಹಾಕಿಕೊಂಡು, ಜೊತೆಗೆ Sunday Special Sweet ತೆಗೆದುಕೊಂಡು, ಒಂದು ಪ್ರಶಸ್ತವಾದ ಜಾಗ ಹುಡುಕಿ ಸಂವಾದಕ್ಕೆ ಕೂರೋದು.

"Green leaf ಒಂದು ಬೇಡ. ಇರೋದೆಲ್ಲ ರುಚಿ ನೋಡಿ ಆಗಿದೆ."

"Rasoi?"
"ಅಯ್ಯೋ! ಮೊನ್ನೆ ನಾನು classmates ಜೊತೆ ಹೋಗಿದ್ದೆ. ಏನ್ ಏನೂ ಚೆನಾಗಿಲ್ಲ. ಬೇಡ"
"ಹೌದೆ, chef change ಆದಮೇಲೆ ಏನೂ ಉಪಯೋಗ ಇಲ್ಲ"

"Indra`s ಗೆ ಹೋದ್ರೆ?"
"ಏಹೆ! ಅದೆಂಥ ಹೋಟ್ಲು? ನಾನೇ ಅದಕಿಂತ ಚೆನಾಗ್ ಮಾಡ್ತೀನಿ"

"Veg park ಗೆ ಹೋಗಣ? ಸುಮಾರ್ ದಿನ ಆಯ್ತು.."
"ಆ cashier stare ಮಾಡಿ ಮಾಡಿ ಇಡ್ತಾನೆ. ರಗಳೆ. ಸಂತೋಷವಾಗಿ ತಿನ್ನಕ್ಕು ಆಗಲ್ಲ, ಬೇಡ ಕಣೆ"

"Authana ಹೊಗಣ್ರೆ , ನಾನ್ ಹೋಗೆ ಇಲ್ಲ, garden restaurant ಇದ್ಯಂತೆ.. "
"ಸಂಜೆ ಆದ ತಕ್ಷಣ ಸೊಳ್ಳೆ ಅಂದ್ರೆ ಸೊಳ್ಳೆ ಆ garden ಲಿ. ಜೊತೆಗೆ ಒಂದು ಗಂಟೆ ಅವನು serve ಮಾಡಕ್ಕೆ. 8:30 ಒಳಗೆ ಬರಕ್ ಆಗಲ್ಲ"

"ಅದರ ಎದುರಿಗೆ ಮತ್ತೊಂದು ಇದಿಯಲ .. ಅದು?"
"Sixth main ಆ? "
"butter naan ಮತ್ತೆ mint lime juice ಬಿಟ್ರೆ ಬೇರೆ ಏನ್ ಚೆನಾಗಿದೆ ಹೇಳು ಅಲ್ಲಿ?"

"Chinese ತಿನ್ನಣಾ?"
"ಆ mezzulana ಲಾ?"
"ಆ uncle ದು ಕಾಟ! ನಮಗೆ choose ಮಾಡಕ್ಕೆ ಬಿಡಲ್ಲ. ನೆನಪಿಲ್ವಾ? ಅವರೇ 'ಇದು ಚೆನಾಗಿದೆ' ,'ಅದು ಚೆನಾಗಿದೆ', 'ಇದರ ಜೊತೆಗೆ ಅದು ತೆಗೊಳ್ಳಿ' ಅನ್ಕೊಂಡು... ಬೇಡ್ವೆ"

"Cindrella mess ಇದೆ ಅಲಾ..."
"ಅಲ್ಲಿ ಕೂತು ತಿನ್ನೋದಕ್ಕೆ ಆಗಲ್ಲ, ಹೊರಗಡೆ ಹುಡ್ಗುರು ಸಿಗರೇಟು ಸೇದುತ್ತ ಇರ್ತಾರೆ. parcel ಎ ತರಬೇಕು. ಇಲ್ಲಿಗೆ ಬರೋಹೊತ್ತಿಗೆ ತಣ್ಣಗಾಗತ್ತೆ. "

"ಬೇರೆ ಯಾವ ಜಾಗ ಇದೆ ಹೇಳು KD ಲಿ? "
"Top stuff, Tao, Casino..."
"ಅದನ್ಯಾಕೆ ಹೇಳ್ತ್ಯ? veg & non veg. ಅವಳು ಬರಲ್ಲ ಅಂತ ಗೊತ್ತಿಲ್ವಾ? "
"ಕೇಳಿದಕ್ಕೆ ಹೇಳಿದ್ದು ನಾನು"

"ಹೋಗ್ಲಿ, ಇನ್ನೇನ್ ಇದೆ ಆ ರಸ್ತೆ ಲಿ...? ....temptation!"
"ಅವನು home delivery ನೆ ಮಾಡ್ತಾನೆ . ಅಲ್ಲಿ ತನಕ ಯಾಕೆ ಹೋಗ್ಬೇಕು?"
"ಅದೂ ಸರಿ, ಅನ್ನನು ಗಟ್ಟಿ ಗಟ್ಟಿ ಅಲ್ಲಿದು."

"how abt pizza hut & Dominos?"
"ಹೋಗೆ, ಆ ಬ್ರೆಡ್ ತುಂಡಿನ ಮೇಲೆ ನಾಕು piece ತರಕಾರಿ ಉದುರಿಸಿ, cheese ಹಾಕಿದ ಹಂಗೆ ಮಾಡಿ ಕೊಡ್ತಾನೆ. ಅದಕ್ಕೆ ಅಷ್ಟೆಲ್ಲಾ ದುಡ್ಡು ಬೇರೆ! ಮನೇಲೆ ಮಾಡಿ ತಿನ್ಬಹುದು ಅದಕ್ಕಿಂತ. ಮೊನ್ನೆ ಮನೆಗೆ ಹೋದಾಗ......"
"ಆಯ್ತು!!!! ಸಾಕು!! cancel ಅದು"

"KD ಲಿ ಸರಿಯಾದ ಹೊಟ್ಲೆ ಇಲ್ವಾ?"
"ಎಲ್ಲದರಲ್ಲೂ ಒಂದ್ ಒಂದ್ problem ನಮಿಗೆ "

"hey! ಕುವೆಂಪು ನಗರದ ಕಡೆ ಸುಮಾರ್ ಇದೆ. ಅಲ್ಲಿಗೆ ಹೋಗಬಹುದು"
"ಯಾವುದ ಇದೆ ಹೇಳು ಗೊತ್ತಿರೋದು? ಹಳ್ಳಿ ಮನೆ, Khana khazana, Refuel, KBC......."
"ಹೋಗೋದು ಬರೋದು ಹೆಂಗೆ ಹೇಳು? ಆ side ಬಸ್ಸೇ ಇಲ್ಲ ಇಲ್ಲಿಂದ ಸರಿಯಾಗಿ. ಆಗಲ್ಲ ಅದೆಲ್ಲ "

"City ಗೆ ಬಸ್ ಇದೆ , ಆದ್ರೆ ಅಲ್ಲಿ ತನಕ ಊಟಕ್ಕೆ ಅಂತ ಹೋಗೋದಕ್ಕೆ ಬೇಜಾರು.."

(ಅಷ್ಟು ಹೊತ್ತಿಗೆ ತಟ್ಟೇಲಿ ಇದ್ದ special ಊಟ ಮುಗಿದಿರೊತ್ತೆ)

"ಬಿಡು, ನಮಿಗೆ Green leaf ಎ ಸರಿ. ಹತ್ರನೂ ಆಗತ್ತೆ, ರುಚಿನು ಇದೆ, price ಗೆ ತಕ್ಕ quantity ನೂ ಕೊಡ್ತಾನೆ.ಅಲ್ಲಿಗೆ ಹೋಗಣ"



PS: ಇದು... ಹೆಚ್ಚು ಕಡಿಮೆ ನಾಲ್ಕು ವರ್ಷ, ನಾನು ಮೈಸೂರಿನಲ್ಲಿ hostel ಲಿ ಇರೋವಾಗ , ಪ್ರತಿ ಭಾನುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನಡಿತಾ ಇದ್ದಿದ್ ಸಂಭಾಷಣೆ. ನಮಗೆ ಭಾನುವಾರ ರಾತ್ರಿ ಮೆಸ್ಸ್ ಇರ್ತಾ ಇರ್ಲಿಲ್ಲ. ಹೊರಗಡೆ ಹೋಗಿ ತಿನ್ನಬೇಕಿತ್ತು. ರಾತ್ರಿ 8:30 ಒಳಗೆ ವಾಪಾಸು ಬರಬೇಕಿತ್ತು. ಅದಿಕ್ಕೆ ಈ ಚರ್ಚೆ. ಸುಮಾರಿಗೆ ಇದೇ Dialogue ಗಳನ್ನೇ ಆಡ್ತಾ ಇದ್ವಿ ಪ್ರತಿ ಸಲನು :)
ಇದು engineering ಮುಗಿಸಿ, hostel ಬಿಟ್ಟು ಬಂದ ಮೇಲಿನ ಮೊದಲ ಭಾನುವಾರ ಮಧ್ಯಾಹ್ನ . ಊಟಕ್ಕೆ ನಾನು, ಅಮ್ಮ ಮಾತ್ರ . ರಾತ್ರಿ ಊಟಕ್ಕೆ ಮನೆ kitchen off ಇಲ್ಲ. so, ಹೋಟೆಲ್ ಹುಡುಕೋ ಅಗತ್ಯ ಇಲ್ಲ! :)

ಯಾರಿವಳು ಬಲ್ಲಿರಾ?

ನಮ್ಮ ಹಾಸ್ಟೆಲ್ warden ಕನ್ನಡ ಪ್ರಾಧ್ಯಾಪಕಿ. ಒಂದು ಎರಡನೇ ಸೆಮಿಸ್ಟರ್ ಮಕ್ಕಳಿಗೆ ಕನ್ನಡ ಪಾಠ ಮಾಡುವುದರ ಜೊತೆಗೆ ಹಾಸ್ಟೆಲ್ resident warden ಕೆಲಸವನ್ನೂ ನಿರ್ವಹಿಸುತ್ತಾರೆ. ಕೋಪ ಬಂದರೆ ಕನ್ನಡ ಒಳ್ಳೇ ಪದಗಳು ಮರೆತು ಹೋಗುತ್ತದೆ. ಇರ್ಲಿ ಬಿಡಿ, ಅದೆಲ್ಲಾ ಬೇಡ ಈಗ. Anyways ಹಾಸ್ಟೆಲ್ ಲಿ ಇರುವ ನೂರಾರು rules ಗಳ ಪೈಕಿ 8 ರಿಂದ ೩೦ ಒಳಗೆ ಹಾಜರಿ ಕೊಡುವುದೂ ಒಂದು. ನಿನ್ನೆ ಅಲ್ಲ ಮೊನ್ನೆ ಹಾಜರಿಗೆ ಹೋದಾಗ, ಒಂದು ವಿಶೇಷ ಕಾದಿತ್ತು. notice board ಮೇಲೆ "ಯಾರಿವಳು ಬಲ್ಲಿರಾ? " ಎಂಬ ಶೀರ್ಷಿಕೆ ಹೊತ್ತ 6-7 ಸಾಲಿನ ಕವನ ಒಂದಿತ್ತು. ಕೆಳಗೆ,ಕವನ ಯಾರ ಬಗೆಗೆ ಇದೆ ಎಂದು ಸರಿಯಾಗಿ ಊಹಿಸಿದವರಿಗೆ ಬಹುಮಾನವಿದೆ ಎಂಬ note! clue : ಕೊನೆಯ ಸೆಮಿಸ್ಟರ್ ನ ವಿಧ್ಯಾರ್ಥಿನಿ. ಬಂದವರೆಲ್ಲಾ ಓದಿ, ತಮಾಷೆ ಮಾಡಿ, ಅವರಿಗೆ ಸರಿ ಎನಿಸಿದ ಹೆಸರೊಂದನ್ನು ಹೇಳಿ ಹೋಗುತ್ತಿದ್ದರು. ಕನ್ನಡ ಓದಲು ಬಾರದವರು, ಬರುವವರ ಬಳಿ ಓದಿಸಿಕೊಂಡು ಊಹಿಸುವ ಪ್ರಯತ್ನ ಮಾಡುತಿದ್ದರು.

ಎರಡನೇ ದಿನದ ಕವನ ಇಂತಿತ್ತು

ಸಂದರ್ಭ ಸನ್ನಿವೇಶದ ಅರಿವಿರುವ
ಮಾತು ಮೌನದ ತಿಳಿವಿರುವ
ಕಿರಿಯ ಹಿರಿಯರ ಒಲವು ತುಂಬಿದ
ತೂಕ ತಪ್ಪದೆ ನಡಿಯುವ
ಇದ್ದೂ ಇಲ್ಲದಂತಿರುವ
ಪ್ರಕೃತಿಯ ಒಂದಂಶವಾಗಿರುವ
ಈ ಮಾದರಿ ವಿದ್ಯಾರ್ಥಿನಿ ಯಾರು ಬಲ್ಲಿರಾ?

ಯಾರಿದು ಇಷ್ಟೆಲ್ಲಾ ಹೊಗಳಿಕೆ ಗಳಿಸಿದವರು ಎಂದು ಮಾತಾಡುತ್ತಾ, ತಮಾಷೆ ಮಾಡುತ್ತಾ, "ನಾನು! ನಾನು!" ಎನ್ನುತ್ತಾ ಬಂದೆವು. ಮತ್ತೆ ನೋಡಿದರೆ ಅದು ನಾನೇ! ಅರೇ ವಾಹ್! ಮಾದರಿ ವಿದ್ಯಾರ್ಥಿನಿ :) friends ಚೆನ್ನಾಗಿ ಛೇಡಿಸಿದರು , ನಾನೂ ಮಜಾ ತಗೊಂಡೆ .ಖುಷಿನೂ ಆಯ್ತು. (ಸ್ವಲ್ಪ ಅತಿಶಯೋಕ್ತಿ ಆಯ್ತು. ಗೊತ್ತು. ಎಷ್ಟಂದ್ರೂ ಕವನ ಅಲ್ವಾ? )ಅದು ನಿನ್ನೆಗಾಯ್ತು.

ಇವತ್ತು ಸಂಜೆ ಓದುತ್ತ ಕೂತಿದ್ದೆ ( ಹೌದು, internals announce ಆಯ್ತು. ಹಾಗಾಗಿಯೇ ಓದು ಬರಹ ). ಇಬ್ಬರು ಜ್ಯೂನಿಯರ್ ಗಳು ಬಂದು "ಮೇಡಂ, G-17 ಗೆ ಹೋಗಿ ಗ್ರೀಷ್ಮ ನಲ್ಲಿ ಕೇಳಿ ಸಿಹಿ ತಿನ್ನಿ" ಅಂತ ಹೇಳಿದ್ರು ಹಾಗಾಗಿ ಬಂದ್ವಿ ಅಂತೆ. ನಾನು ಒಂದ್ ಸೆಕೆಂಡು ಯೋಚನೆ ಮಾಡಿದೆ. ಆಮೇಲೆ ನೋಡಿದ್ರೆ ನಿನ್ನೆಯ "ಯಾರಿವಳು ಬಲ್ಲಿರಾ" ವಿಜೆತರಿವರು. ನಾಳೆ ಕೊಡುವ ಎಂದು ಹೇಳಿ ಕಳಿಸಿದ್ದಾಯ್ತು. ಎರಡೇ ನಿಮಿಷ! ರೂಮಿನ ಹೊರಗೆ ಒಂದು ದೊಡ್ಡ ಗುಂಪು! ಗಲಾಟೆ, ಮೋಸ ಗ್ರೀಷ್ಮಕ್ಕ ಅಂತ! ನಿನ್ನೆಯ ವಿಜೇತರ ದೊಡ್ಡ ಪಟ್ಟಿಯನ್ನೇ notice board ನ ಮೇಲೆ ಹಾಕಿ, ಬಹುಮಾನಕ್ಕಾಗಿ ರೂಮಿಗೆ ಹೋಗಿ ಅಂತ note ಬೇರೆ! ಅದಕ್ಕೆ ಇಷ್ಟೆಲ್ಲಾ (ಮೇಡಂ ಬಾರಿ ಜಾಣರು, ಬಹುಮಾನ ಅಂತ ಹೇಳಿ, ಕೊನೆಗೆ ಕೊಡುವ ಸಮಯ ಬಂದಾಗ ನಮ್ಮನ್ನ ತೋರಿಸೋದಾ? ) ರಗಳೆ ಮಾಡಿ ಮಾಡಿ ಇಟ್ಟರು. ಕೊನೆಗೆ ಒಂದು chocolate ಗೆ ಒಪ್ಪಿದರು.ಇವತ್ತಷ್ಟೇ ಒಂದು ಪಾಕೆಟ್ eclairs ತಂದಿದ್ದೆ. ಪುಣ್ಯ! ಬಚಾವ್!

ನನ್ನ ಮೇಲೆ ಇಷ್ಟೆಲ್ಲಾ attack ಆಗೋವಾಗ ನನ್ನ ಸ್ನೇಹಿತೆ ಅವರ ಕಡೆ ಸೇರಿ, ಮಜಾ ತಗೋತಾ ಇದ್ಲು. ಹೋಗಿ ನೋಡಿದ್ರೆ, ಇವತ್ತಿನ "ಯಾರಿವಳು" ಅವಳೇ! 8:10 ಕ್ಕೇ ಹನುಮಂತನ ಬಾಲದಷ್ಟು ಉದ್ದ ಪಟ್ಟಿ ರೆಡಿ
ಆಗಿತ್ತು. ನಾಳೆ ಅವಳಿಗಿದೆ ಹಬ್ಬ!

PS: interaction ಗೆ ಮೇಡಂ ಮಾಡಿಕೊಟ್ಟ ಈ ಅವಕಾಶ ಸೂಪರ್! ದಿನಾ ಗಂಟೆ ಎಂಟು ಆಗೊದನ್ನೇ ಕಾಯ್ತಾ ಇರ್ತಿವಿ (ಅವರಿಗೆ ಹಾಜರಿ ಕೆಲಸವು ಸುಲಭ ಆಯ್ತು) . ಧನ್ಯವಾದಗಳು ಮೇಡಂ ಒಳ್ಳೇ farewell gift !

CieSta 09


Even ಸೆಮಿಸ್ಟರ್ ಅಂದರೆ event ಗಳ ಸೆಮಿಸ್ಟರ್. ಎಲ್ಲಾ ಬ್ರಾಂಚುಗಳದ್ದು , ಕಾಲೀಜಿನದ್ದು, ಅಸೋಸಿಯೇಷನ್ ಗಳದ್ದು, ಹೀಗೆ ವಾರಾಂತ್ಯದಲ್ಲಿ ಒಂದಲ್ಲ ಒಂದು fest ಇದ್ದೇ ಇರುತ್ತೆ . ಈಗೊಂದು ಎರಡು ವಾರಗಳ ಹಿಂದೆ ನಮ್ಮ ಬ್ರಾಂಚಿಂದು fest ಮಾಡೋಣ ಅಂತ ಆಯ್ತು (ಕೊನೆ ಸೆಮಿಸ್ಟರ್ ಅಂದ್ರೆ ಹೀಗೆ, ಮಜಾ ಮಾಡೋಕೆ ಪ್ರತಿ ದಿನ ಒಂದೊಂದು ನೆಪ ಹುಡುಕೋದು). ಎಲ್ಲಾರಿಗೂ ಹುರುಪು. 3- 4 ವರ್ಷಗಳ ನಂತರ ಈ ಪ್ರಯತ್ನ ನಡಿತಾ ಇರೋದು. ಇದಾದ ಎರಡೇ ದಿನದಲ್ಲಿ cancel ಆಯ್ತು ಅಂತ ಸುದ್ದಿ. ಆಗತ್ತೆ, ಆಗಲ್ಲ, ಎ ಮದ್ಯೆ ತೂಗುತ್ತಾ ಇತ್ತು. ಕೊನೆಗೊಂದು ದಿನ ಪರ್ಮಿಶನ್ ಅಂತು ಸಿಕ್ಕಿತು. ಜೊತೆಗೆ ದಿನ ಕೂಡ ಅವರೇ ನಿಶ್ಚಯ ಮಾಡಿ ಕೊಟ್ಟಿದ್ರು. 28,29 ಅಂತ. 24 ಕ್ಕೆ ಇಂಟರ್ನಲ್ಸ್ ಮುಗಿಯುತ್ತೆ , 27 ಯುಗಾದಿ. ಜನ ಒಟ್ಟು ಮಾಡೋದೇ ದೊಡ್ಡ ಸಮಸ್ಯೆ ಆಗಿತ್ತು. ನಾವು ಬಿಡಿ ಬಂಡ ಜಾತಿ, internals ಗೆಲ್ಲಾ ಹೆದರೋಲ್ಲ. ಆದರೆ 2 ನೇ, 4 ನೇ ಸೆಮಿಸ್ಟರ್ ಮಕ್ಕಳಿಗೆ ಇನ್ನು ಬಂಡತನ ಬಂದಿಲ್ವೆ. 3-4 ಸಲ ಸಭೆ ಕರೆದರೂ ಅವರಾರೂ ಪತ್ತೇನೆ ಇಲ್ಲ! ಪರ್ಮಿಶನ್ ಜೊತೆ ಹಣ involve ಮಾಡದೆ fest ಮಾಡಬೇಕು ಅಂತನೂ ತಾಕಿತು ಮಾಡಿದ್ರು. ಅಲ್ಲಾ, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಅಂದರೆ ಒಂದು ಸೇರು ಅಕ್ಕಿ ಕೊಡಿ, ಬಹುಮಾನವಾಗಿ ಒಂದು ಮೂಟೆ ತಗೊಂಡು ಹೋಗಿ ಅಂತ ಹೇಳಕ್ಕಾಗತ್ತಾ? ಈ recession ಕಾಲದಲ್ಲಿ sponsorship ಸಿಗೊದೇನೋ ಕಷ್ಟವೇ ಅನ್ನಿ. ಆದರೂ.... ಬಿಡಿ, HOD ಹೇಳಿ ಆಗಿತ್ತಲ್ಲ, ಮೀರೋದಕ್ಕಾಗಲ್ಲ. ನಾವೇ ಒಂದಿಷ್ಟು ಜನ ಹಣ ಹಾಕಿ minimum bugdet ನಲ್ಲಿ ಮಾಡೋದು ಅಂತ ಆಯ್ತು (ಇದಕ್ಕೂ ಅವಕಾಶ ಇರಲಿಲ್ಲ. "ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ" ಅಂತ ಹೇಳಿ ಮಾಡಿದ್ದಾಯ್ತು).

ಎಲ್ಲಾರ ಹತ್ರ ಹೋಗಿ "ಬನ್ನಿ", "ಮನೆಗೆ ಹೋಗಬೇಡಿ", "ಹೋದ್ರು, ವಾಪಾಸು ಬನ್ನಿ" ಅಂತ ಹೇಳಿದ್ದಾಯ್ತು. ಕೆಲಸಗಳನ್ನ ಹಂಚಿಕೊಂದಿದ್ದಯ್ತು. ಕೆಲಸ ಮಾಡೋಕೆ ಇದ್ದದ್ದು 8-10 ದಿನಗಳು ಮಾತ್ರ. ಅದರಲ್ಲೂ internals ಬೇರೆ! ಮುಕ್ಕಾಲು ವಾಸಿ ಜನಕ್ಕೆ attendance ಇರಲಿಲ್ಲ. ಹಾಗಾಗಿ ಬರಿಯೋ ಕಾಟ ತಪ್ಪಿತು ;) ಕೆಲಸ ಬಿರುಸಿನಿಂದ ಆರಂಭವಾಯಿತು. CieSta ಅಂತ ನಾಮಕರಣವೂ ಆಯಿತು.Siesta ಎಂದರೆ ಯಾವುದೋ ಭಾಷೆಯಲ್ಲಿ ನಿದ್ದೆ ಎಂದರ್ಥ. ಆದರೂ "Ciesta sounds like fiesta" ಮತ್ತು C ಮತ್ತು S ಈ ಎರಡೂ ಅಕ್ಷರಗಳಿವೆ ಎಂದು ಇದನ್ನೇ ಇಟ್ಟಿದ್ದಾಯಿತು. ಬಣ್ಣ ಬಣ್ಣದ, ಚಿತ್ರ ವಿಚಿತ್ರವಾದ posters ತಯಾರಾದವು, ಕಾಲೇಜಿನ ಗೋಡೆಗಳ ಮೇಲೆ ರಾರಾಜಿಸಿದವು.

ಬೆಳಿಗ್ಗೆ ಸಂಜೆ ಮೀಟಿಂಗು, ರಿಹರ್ಸಲ್ಲುಗಳು, ಕಾಲೆಯುವಿಕೆ, photosessionnu ಮಾಡುತ್ತಾ, CS ಹಬ್ಬಕ್ಕೆ ಸಜ್ಜಾದೆವು. ಶನಿವಾರ ಮಧ್ಯಾಹ್ನ ಉದ್ಗಾಟನೆ, ಜೊತೆಗೆ ethnic day. ಹುಡುಗಿಯರು ಸೀರೆ, ಹುಡುಗರು ಪಂಚೆ ಉಟ್ಟು, ಓಡಾಡಿದ್ದೇ ಓಡಾಡಿದ್ದು!
ಆ ದಿನ ನಮ್ಮ ಗುರು ವೃಂದದವರಿಗೆ ಒಂದೆರಡು ಸ್ಪರ್ಧೆಗಳಿದ್ದವು. ಏನ್ ಹುರುಪು ಅಂತೀರಾ!! ಮಾರನೇ ದಿನ ವಿಧ್ಯಾರ್ಥಿ ಮಿತ್ರರಿಗೆ ಸ್ಪರ್ಧೆಗಳು. ಇದನ್ನ ಕೇಳಬೇಕಾ? ಹಾರಾಟ, ಕೂಗಾಟ,ಕಿರಚಾಟ, ಸಂಭ್ರಮವೋ ಸಂಭ್ರಮ! ಸಂಜೆ ಪ್ರತಿಭಾ ಕಾರಂಜಿ. ಅಲ್ಲ, ಹೊಳೆಯೇ ಹರಿಯಿತು. ಆಡಿಟೋರಿಯಮ್ ತುಂಬಾ ಜನ ಕಿಕ್ಕಿರಿದಿದ್ದರು. funds ಇಲ್ಲದೇ ಇರೋ festu, ಅದು , ಇದು, ಅಂತ ತಮಾಷೆ ಮಾಡಿದೋರೆಲ್ಲಾ ಬಂದು, ಹಾಡಿಗೆ ತಾಳ ಹಾಕಿ, skit ಗೆ ನಗಾಡಿ, ಡಾನ್ಸ್ ಗೆ ಹೆಜ್ಜೆ ಹಾಕಿ, ನಮ್ಮೊಂದಿಗೆ ಖುಷಿಪಟ್ಟರು :)

ಕೊನೆಗೆ ಮುಗಿತಲ್ಲಾ ಅಂತ ಬೇಜಾರಾದರೂ, ಇಷ್ಟೆಲ್ಲಾ ತೊಂದರೆಗಳ ನಡುವೆಯೂ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಮಾಡಿ ತೋರಿಸಿದೆವು ಅನ್ನೋ ಸಂತೋಷ, ಹೆಮ್ಮೆ :)

ಹೇಳಲು ಮರತೆ! ಕಹಿ ಹಾಗಲಕಾಯಿ ಜ್ಯೂಸು ಕುಡಿದು, ಒಣಕಟ್ಟೆ ಬನ್ನು ತಿಂದು, ನಮ್ಮಿಬ್ಬರ ಬಗೆಗಿನ ವಿಷಯಗಳನ್ನೋದಿಷ್ಟು ನೆನಪಿಟ್ಟುಕೊಂಡು, ಒಂದಿಷ್ಟು ಸರ್ಕಸ್ಸು ಮಾಡಿ, "ಆಪ್ತಮಿತ್ರ" ರೆಂದು official ಆಗಿ ಘೋಷಿತರಾದದ್ದು ಮತ್ತಷ್ಟು ಸಂತೋಷ ಕೊಟ್ಟಿತು :)

ಯೇ ದೋಸ್ತಿ...

ಸ್ನೇಹ ಸಂಬಂಧ ಬಾರಿ ಚಂದ. ಜೀವನದ ಪ್ರತಿಯೊಂದು ಹಂತದಲ್ಲೂ ಸ್ನೇಹಿತರು ಬೇಕು. ಶಾಲೆಗೆ ಹೋಗಲು ಶುರು ಮಾಡೋ ಮೊದಲು, ಎದುರು ಮನೆ ಪುಟ್ಟನೋ ಅಥವಾ ಪಕ್ಕದ ಮನೆ ಪುಟ್ಟಿನೋ ಇಡೀ ದಿನ ಆಟ ಆಡೋಕ್ ಬೇಕು.ಶಾಲೆಗೆ ಹೋಗೋದಕ್ಕೆ ಶುರು ಮಾಡಿ, 3-4ನೇ ವರೆಗೆ ಬೆಂಚಿನಲ್ಲಿ ಪಕ್ಕದಲ್ಲಿ ಕೂರೋರೆ ಸ್ನೇಹಿತರು. ಹೊಸ ಪೆನ್ಸಿಲ್ಲು, ಹೊಸ ರಬ್ಬರ್ರು ತಂದರೆ ತೋರಿಸೋದಕ್ಕೆ ಬೇಕು, games period ಲಿ ಆಡೋದಕ್ಕೆ ಬೇಕು... ಸ್ವಲ್ಪ ಬುದ್ಧಿ ಬಂದ ಮೇಲೆ ಪಕ್ಕದಲ್ಲಿ ಕೂರೋರು ಆಗಲ್ಲ.ಆಗ ಒಬ್ರು ಸಾಕಾಗಲ್ಲ. ಒಂದು ಗುಂಪು ಬೇಕು. lunch break ಲಿ ಸುತ್ತ ಕೂತು ಬುತ್ತಿ ಹಂಚಿಕೊಂಡು ತಿನ್ನಕ್ಕೆ, games period ಲಿ ನಮ್ಮದೇ ಆಟ ಆಡಕ್ಕೆ, ಹುಟ್ಟು ಹಬ್ಬದ ದಿನ ಮನೆಗ್ ಕರೆದು ಜೊತೇಲಿ ಸಂಭ್ರಮಿಸೋದಕ್ಕೆ...ಸ್ವಲ್ಪ ಕಡಿಮೆ ಜನ ಸಾಕು high school ಲಿ. "ಆ day", "ಈ day" ಗೆ ಕಾರ್ಯಕ್ರಮ ಕೊಡೋದಕ್ಕೆ, ಒಟ್ಟಿಗೆ ಕೂತು ಓದೋದಕ್ಕೆ, ಸೈಕಲಿನಲ್ಲಿ ಊರು ತಿರುಗೊದಕ್ಕೆ, ಶಾಲೆಗೆ ಚಕ್ಕರ್ ಹಾಕಿದರೆ ಮಾರನೆ ದಿನ notes ತಗೊಳೋದಕ್ಕೆ.. PU ಗೆ ಬರೋವಾಗ ಒಬ್ಬರೋ ಇಬ್ಬರೋ ಮಾತ್ರ ತುಂಬಾ ಹತ್ರ. ಅವರೊಂದಿಗೆ doubts ಬಗ್ಗೆ ಡಿಸ್ಕಶನ್, ಅವರೇ ಟ್ಯುಶನ್ನಿಗೆ ಹೋಗೋಕೆ ಜೊತೆ, ಅವರೊಂದಿಗೆ ಪುಸ್ತಕ exchange ಮಾಡೋದು, ಅವರೊಟ್ಟಿಗೇ ಕೂತು ನಾಳೆಯ ಬಗ್ಗೆ ಕನಸು ಕಟ್ಟೋದು, ಆಗೊಂದು ಈಗೊಂದು ಸಲ ಪಾನಿ ಪುರಿ ತಿನ್ನಕ್ಕೆ ಹೋಗೋದು... ಇನ್ನು ಡಿಗ್ರಿಗೆ ಬಂದ ಮೇಲೆ ಪುನಃ ಬೇಕು ಒಂದು ಗುಂಪು ಕಾಲೇಜು ಸುತ್ತೋಕೆ, ರಸ್ತೆ ಉದ್ದ-ಅಗಲ ಅಳೆಯೋಕೆ, ಅಲ್ಲಿ ಇಲ್ಲಿ ಕೂತು ಹರಟೋಕೆ, ಸಿನಿಮಾ ನೋಡೋಕೆ.. ಹಾಸ್ಟೆಲ್ ಲಿ ಇರೋರಿಗೆ ಊಟ ಮಾಡಕ್ಕೆ, ಗಲಾಟೆ ಮಾಡಕ್ಕೆ, shopping ಗೆ ಹೋಗಕ್ಕೆ, ಹುಷಾರ್ ಇಲ್ಲದೆ ಇರೋವಾಗ ಆರೈಕೆ ಮಾಡಕ್ಕೆ ....

ಈ ಹಂತದಲ್ಲಿ ಒಬ್ರು Best friend ಬೇಕು. ನೋವಾದಾಗ ಹೋಗಿ ಸಮಾಧಾನ ಮಾಡಿಸಿಕೊಳ್ಳೋಕೆ, ಸಂತೋಷ ಆದಾಗ ಸಂಭ್ರಮಿಸೋದಕ್ಕೆ. ಯಾವ ಹೊತ್ತಿಗಾದರೂ, ಯಾವುದೇ ವಿಷಯವನ್ನಾದಾರೂ ಯೋಚನೆ ಮಾಡದೇ ಹೇಳಿಕೊಳ್ಳೋಕೆ , ಯಾವುದೇ ಸಹಾಯ ಬೇಕಾದಾಗ ಮುಜುಗರವಿಲ್ಲದೆ ಕೇಳೋಕೆ. ಎಲ್ಲರಿಗೂ ಬೇಕು. ಇದ್ದೇ ಇರ್ತಾರೆ. ಅಪ್ಪ, ಅಮ್ಮ, ತಮ್ಮ, ತಂಗಿ, ಸಹಪಾಠಿ, ರೂಮ್ ಮೆಟ್, online ಫ್ರೆಂಡ್... ಯಾರೂ ಆಗಿರಬಹುದು.

"ಆದರ್ಶ ದಂಪತಿಗಳು" lines ಲಿ "ದಿಲ್ ದೋಸ್ತಿ" ಎಂಬ ಸ್ನೇಹ ಪರೀಕ್ಷೆ ಇತ್ತು ನಿನ್ನೆ. ನೆರೆಯ ಕಾಲೇಜಿನಲ್ಲಿ. ನಾನು -ಅವಳು ತಯಾರಿ ಶುರು ಮಾಡಿದ್ವಿ. favourite color? ಯಾವುದು ಅಂತ ಇಬ್ಬರಿಗೂ ಗೊತ್ತಿಲ್ಲ! (ನಮ್ಮದೇ ನಮಗೆ ಗೊತ್ತಿಲ್ಲ, ಇನ್ನು ಮತ್ತೊಬ್ಬರದ್ದು ಎಲ್ಲಿಂದ?) ಅಲ್ಲಾ,.. "ಇದೇ ಬಣ್ಣ ಇಷ್ಟ " ಅಂತ ಹೇಳೋದಕ್ಕೆ ಆಗತ್ತಾ?? ಇರಲಿ, ಕೊನೆಗೆ ಒಂದೊಂದು ಬಣ್ಣನ fav ಅಂತ ಇಟ್ಟುಕೊಂಡ್ಡಿದ್ದಾಯಿತು. fav ಅದು, fav ಇದು... ಅಂತ ಒಂದಿಷ್ಟು ಲಿಸ್ಟ್ ಮಾಡಿ ಅದ್ಕೆಲ್ಲಾ ಉತ್ತರ ಹುಡುಕುತ್ತ ಹೋಗಿದ್ ಆಯ್ತು (ಕ್ಲಾಸ್ ಲಿ). ನಾಲ್ಕು ವರ್ಷ ಆಗುತ್ತಾ ಬಂತು, thick friends ಅಂತ ಫೇಮಸ್.ಆದರೆ ಏನು ಗೊತ್ತಿಲ್ಲ!ಹಾಗಾದ್ರೆ.....?

ಈ ನೆಪದಲ್ಲಿ ಒಂದಿಷ್ಟು ತಿಳಿದುಕೊಂಡಿದಾಯ್ತು (ನನ್ನ ಬಗ್ಗೇನೂ ತಿಳೀತು ;) ) ನಿನ್ನೆ-ಇವತ್ತು ಸ್ಪರ್ಧೇಲಿ ಅಂತು ಈ ಜ್ಞಾನ ಕೆಲಸಕ್ಕೆ ಬಂತು. ಆದರೆ ಇಷ್ಟೆಲ್ಲಾ, ಎಲ್ಲಾ "best friends" ಗೂ ಗೊತ್ತಿರತ್ತಾ?? ಗೊತ್ತಿರಬೇಕಾ?? ಗೊತ್ತಾಗ್ತಿಲ್ಲ!!

ಕೊನೆಯ ಮೊದಲು

ಎರಡು ವಾರದ ಹಿಂದೆ ಶುರು ಆಗಬೇಕಿತ್ತು ಸೆಮಿಸ್ಟರ್. ನಮ್ಮ department tradition ಅಂತೆ ಒಂದ್ ವಾರ ಬಿಟ್ಟು ಆದರೂ ಆಗಬಹುದು ಅಂತ ಕಳೆ ವಾರ ಬಂದೆ. ಆದರೆ ಯಾರಿಗೂ ರಜದ ಅಮಲು ಇನ್ನೂ ಇಳಿದಿರಲಿಲ್ಲ. ಒಳ್ಳೆಯ ನಕ್ಷತ್ರ ಅಂತ ಕಾಣತ್ತೆ, ಇವತ್ತು ಶುಭಾರಂಭ ಮಾಡೋದು ಅಂತ ಆಯ್ತು. ಸೆಮಿಸ್ಟರ್ ಮೊದಲ ದಿನ ಅನ್ನೋ ಉತ್ಸಾಹದಲ್ಲಿ ಬೆಳಿಗ್ಗೆ ಬೇಗ ಎದ್ದು, ತಣ್ಣೀರಿನಲ್ಲಿ ತಲೆಸ್ನಾನ ಮಾಡಿ ಗೆಳತಿ ಜೊತೆ ಹೊರಟೆ. ಹೊಸ ಮೇಷ್ಟ್ರುಗಳು, ಹೊಸ ವಿಷಯಗಳು, ಮೇಲಾಗಿ ಕಾಲೇಜಿನಲ್ಲಿ ನಮ್ಮ ಸೀನಿಯರ್ ಸ್ಥಾನ ಬಡ್ತಿ! valentine`s day ಗೆ VTU ಪ್ರೀತಿಯ ಕಾಣಿಕೆ "bumper result" ಬೇರೆ ಬಂದು ನಮ್ಮ ಉತ್ಸಾಹನ ಇನ್ನೂ ಹೆಚ್ಸಿತ್ತು. ಆದರೆ ಮೇಡಂ ಚಕ್ಕರ್! ಅವರದ್ದಲ್ಲ ಬಿಡಿ ತಪ್ಪು, ನಾವು ಇವತ್ತು ಪಧಾರಿಸುತ್ತಿವಿ ಅಂತ ಅವರಿಗೆ ಯಾರು SMS ಮಾಡಿದಾರೆ?

ಕಾಲೇಜ್ ಪ್ರದಕ್ಷಿಣೆ ಹಾಕುತ್ತ, ಸಿಕ್ಕ ವಿದ್ಯಾ ಗಣಪತಿಗೆ ಒಂದ್ನಮಸ್ಕಾರ ಹಾಕಿ, ಹತ್ಹತ್ರ ಒಂದು ವರ್ಷ ಆದ ಮೇಲೆ ಸಿಗುತ್ತಿರೋ ನನ್ನ ಹಳೇ room mate ಜೊತೆ ಎರಡು ಮಾತಾಡಿ, ನಾಕು ಮಿಠಾಯಿ ಬಾಯಿಗೆ ಹಾಕುತ್ತ, ಬೆಂಚು ಬಿಸಿ ಮಾಡುತ್ತಾ, ಮೇಡಂ ಕಾಯ್ತಾಕೂತ್ವಿ.

ಮೊದಲನೇ period ಲಿ, ಲಾಯರ್ ಮೇಡಂ ಜೊತೆ 7-8 ವರ್ಷ ಹಿಂದಿನ ಸಮಾಜ ವಿಜ್ಞಾನ ಕ್ಲಾಸ್ ಗೆ ಹೋಗಬೇಕಾಗಿ ಬಂತು. Constitutionu subjectu.ಆಮೇಲೆ ಶುರು ಆಯ್ತು ನೋಡಿ ನಂ ಪಿಟೀಲ್ ಮೇಷ್ಟ್ರ technical ಪಿಟೀಲು ವಾದನ (with actionu) ! ಸ್ವಂತಿಕೆ, ಜವಾಬ್ದಾರಿ, life stlyu, ಶಿಸ್ತು.. ಎಲ್ಲಾ ಕೀರ್ತನೆ ಗಳನ್ನೂ computer science ರಾಗದಲ್ಲಿ ಕುಯ್ದರು. ಅದೇನೋ modelling/symbolic or numeric representation of life using mathematics ಅಂತೆ! ಇದನ್ನು ಕೇಳಿ ಅಂತು ಬೆವರು ಇಳಿಯೊದಕ್ಕೆ ಶುರು ಆಯ್ತು. ತನಕ ಓದಿದ ಎಲ್ಲ subjects ಅನ್ನೂ ನಿಜ ಜೀವನಕ್ಕೆ relate ಮಾಡ್ತಾ, ದೊಡ್ಡ ದೊಡ್ಡ technical ಪದಗಳನ್ನ ಉಪಯೋಗಿಸುತ್ತಾ ನಮ್ಮನ್ನೆಲ್ಲಾ ದಂಗಾಗಿಸಿದರು. ತಿನ್ನೋ ಕಂಪ್ಯೂಟರು, ಅಳೋ ಕಂಪ್ಯೂಟರು, ನಗೋ ಕಂಪ್ಯೂಟರು ಮಾಡಬೇಕಂತೆ. ಈಗ ಇರೋದೇ ಸಾಲ್ದಾ??? ಕ್ಲಾಸ್ ಲ್ಲಿ ಮಲಗಿದರೆ, ಮಾತಾಡಿದರೆ, technical ಬೈಗಳ! sample ಗೆ ಒಂದೆರಡು ಹೇಳ್ತೀನಿ.. "ಏನ್ರಿ? parallel computing ಮಾಡ್ತಾ ಇದ್ದೀರಾ?" , "timing mismatch ಆಗಿದೆ ನಿಮ್ಮದು" , " I think your processor is not programmed well". ಹೆಂಗೆ? ;) subject ತುಂಬಾ ಕಷ್ಟ ಅಂತ ಕೇಳಿದೀನಿ. ಅಕ್ಕನಂತ (ACA- Advanced Computer Architecture) ವಿಷಯಕ್ಕೆ, ಅಪ್ಪನಂಥ ಮೇಷ್ಟ್ರು ಬೇರೆ ! ಇದಾದಮೇಲೆ ಬಂದ್ರು ನೋಡಿ ನಮ್ಮ ಹಳೇ don. ನಿಶಬ್ಧ . ನಗೆ, ಸಂತೋಷ ಎಲ್ಲ ಮಾಯಾ! ಪಿಟೀಲ್ ಮೇಷ್ಟ್ರು ಹೇಳಿದ ಹಾಗೆ ನಮ್ಮ "senses are weak" ಆಗಿ ಹೋಯಿತು. ಒಂದು ಗಂಟೆ ಕಾಲ primary ಲಿ ಕನ್ನಡ ಟೀಚರ್ ಕಥೆ ಓದಿ ಅರ್ಥ ಹೇಳೋ ರೀತಿಲಿ Cryptography ಪುಸ್ತಕ ಮುನ್ನುಡಿ ಇಂದ ಪ್ರತಿಯೊಂದು ಪದಕ್ಕೂ ಅರ್ಥ ಹೇಳ್ತಾ ಹೋದ್ರು. ಸುಳ್ಳ್- ಸುಳ್ಳು , ತಪ್ಪ್-ತಪ್ಪು ಹೇಳಿದರೂ ಕೋಲೆ ಬಸವನ ಹಾಗೆ ತಲೆ ಅಲ್ಲಾಡಿಸುತ್ತಾ ಕೂತಿದ್ವಿ. ಏನ್ ಮಾಡೋದು? ಸಲ ಪ್ರಾಜೆಕ್ಟು, ಸೆಮಿನಾರು ಅಂತ ಹೆಚ್ಚು ಕಡಿಮೆ 350 ಮಾರ್ಕು ಮೇಷ್ಟ್ರು ಕೈಗಳಲ್ಲಿ :(

ಏನೇ ಆಗಲೀ, ತಿಂಗಳಾದಮೇಲೆ ಎಲ್ಲಾ friends ಭೇಟಿ ಮಾಡಿದ್ದು, ಕಾಲೇಜಿನಲ್ಲಿ ಬೀಟ್ಸ್ ಹಾಕೋದು , YAMPA ಲಿ ಕಾಫಿ ಕುಡಿತಾ ಪಂಚಾಯ್ತಿ ಹೊಡಿಯೋದು, ಕ್ಲಾಸ್ ಲಿ ತೂಕಡಿಸೋದು, Sir ನೋಡಿದಾಗ ನೋಟ್ಸ್ ಬರಿಯೋ ನಾಟಕ ಮಾಡೋದು ಎಲ್ಲಾ ಪುನಃ ಪ್ರಾರಂಭ ಆಯ್ತು. ಆದರೆ ಕೊನೆಯ ಬಾರಿಗೆ :(

ಸಾಧಾರಣರಿಂದಲೂ ಸಾಧ್ಯ


ಅಸಾಧ್ಯ ಎಂಬುದು ಯಾವುದೂ ಇಲ್ಲ, Impossible itself says "i am possible". ಒಂದು ಸಣ್ಣ rubik`s cube ಈ ವಿಚಾರವನ್ನ ನೆನಪಿಸಿತು. ಎಷ್ಟೋ ವರುಷಗಳಿಂದ ಅಸಾಧ್ಯವೆನಿಸಿದ್ದ ಈ ಚಿಕ್ಕ cube ಇಂದು 'ಸಾಧ್ಯ'ವಾದಾಗ ಆದ ಆನಂದ ಅಷ್ಟಿಷ್ಟಲ್ಲ. high school/PU ಲಿ ಇರೋವಾಗ ಇದೆಲ್ಲಾ ಬರೀ Wizkids ಗಳಿಗೆ ಮಾತ್ರ ಸಾಧ್ಯ ಅಂತ ಭಾವಿಸಿದ್ದೆ. Engineering ಗೆ ಬಂದ ಮೇಲೆ ಈ "Wizkids" ಗಳ ಗೆಳೆತನವಾಯಿತು. ಅವರು ನನ್ನಂತೆಯೇ ಎಂದು ಗೊತ್ತಾಗಿ, cube ನ ಮೂರು layer ಗಳನ್ನು ಒಂದೊಂದಾಗಿಯೇ, ಒಬ್ಬೊಬ್ಬರಲ್ಲಿ, ತಿಂಗಳಾನುಗಟ್ಟಲೆ break ಕೊಟ್ಟು ಕೊಟ್ಟು, finally ಇಂದು ಸಂಪೂರ್ಣವಾಗಿ solve ಮಾಡುವುದನ್ನು ಕಲಿತೆ :) ಜೊತೆಗೆ "ಸೋಮಾರಿತನವನ್ನು ಬಿಟ್ಟು, ಒಂದು ಚಿಟಿಕೆ ಆಸಕ್ತಿ , ಒಂದು ಮುಷ್ಟಿ efforts, extra ಹಾಕಿದರೆ, ಅಸಾಧ್ಯವನ್ನು ಸಾಧ್ಯವನ್ನಗಿಸುವುದು ಕಷ್ಟವಲ್ಲ" ಅನ್ನೋದನ್ನೂ ಕಲಿತೆ.
PS: ನನ್ನ ಅಥವಾ ಯಾವುದೇ wizkids ಗಳ ಪರಿಚಯ ನಿಮಗೆ ಇಲ್ಲದೇ ಇದ್ದು, rubik`s cube ಕಲಿಯುವ ಆಸೆ ಇದ್ದರೆ
ಇಲ್ಲಿ ಕ್ಲಿಕ್ಕ್ಕಿಸಿ

ಪುನಾರಾವರ್ತನೆಯ ಸಮಯ!

ಬೆಳಿಗ್ಗೆ newspaper ಗಾಗಿ ಟಿಪಾಯಿ ಮೇಲೆ ಕೈ ಆಡಿಸೋವಾಗ ರಾಮಾಯಣ/ಮಹಾಭಾರತ ಪರೀಕ್ಷೆಯ (ತಮ್ಮ ರಾಮಾಯಣ ಪರೀಕ್ಷೆ ಕಟ್ಟಿದ್ದ) question paper ಸಿಕ್ಕಿತು. PUC ಪಾಠ ನೆನಪಿರೋ ಹಾಗೆ ಇದೂ ನೆನಪಿರುತ್ತೆ ಅಂತ ಓದಲು ಶುರು ಮಾಡಿದೆ. ಎರಡೇ ಪ್ರಶ್ನೆ.. ಆಮೇಲೆ ಉತ್ತರ ಹೊಳೆಯಲಿಲ್ಲ! ಜೋರಾಗಿ ಓದಲು ಶುರು ಮಾಡಿದೆ. ಅಪ್ಪ ಅಮ್ಮನೂ ಈ ಪ್ರಶ್ನಾವಳಿಯಲ್ಲಿ ಭಾಗವಹಿಸಲಿ ಎಂದು (actually ನನಗೆ ಮಾತ್ರ ಅಲ್ಲ ಮರೆತು ಹೋಗಿರೋದು ಅಂತ ಸಮಾಧಾನ ಮಾಡಿಕೊಳೋದಕ್ಕೆ). ಆದರೆ ಪ್ರಶ್ನೆ ಓದಿ ಮುಗಿಯುತ್ತಿದ್ದಂತೆ ಅಪ್ಪ ಉತ್ತರಿಸಲು ಶುರು ಮಾಡಿದರು! ನನಗೆ complex ಆಗಲು ಶುರು ಆಯಿತು. "ಅರೆ! ಮಹಾಭಾರತ ಪರೀಕ್ಷೆ ಲಿ 91 ಬಂದಿದ್ದು ನಂಗೆ. ಅಪ್ಪ ಎಷ್ಟ್ ಚೆನಾಗ್ ಉತ್ತರ ಹೇಳ್ತಾ ಇದಾರಲ! " ಎಂದು. ಅವರು ready ಆಗಿ office ಗೆ ಹೋಗೋ ತನಕ ಕಾದು, ಮತ್ತೆ ಮುಂದುವರೆಸಿದೆ. ಕಾರಣ ಅಮ್ಮನೂ ನನ್ನಂತೆ ಉತ್ತರಕ್ಕಾಗಿ ತಡಕಾಡುತ್ತಿದ್ದರು ;) ಯಾವುದೋ ಒಂದು ಪ್ರಶ್ನೆಯ ಉತ್ತರಕ್ಕೆ ಪಾಂಡವರ ದಾಯಾದಿಗಳ ಹೆಸರು ಬೇಕಿತ್ತು. ನನಗೆ ನೆನಪಾಗಬಾರದೆ! "ಕೌರವರೂ" ನೆನಪಾಗದೆ ಇರೋ ಅಷ್ಟು ಮರೆತು ಹೋಗಿದೆಯೇ ನನಗೆ?! ಪುನಃ ಓದುವ ಕಾಲ ಬಂದಿದೆ ಅಂತ confirm ಆಯಿತು. ಕಿಶೋರ ಭಾರತ ಹಿಡಿಯಲು ಹೊರಟೆ (ಹೌದು. ನನ್ನ levelಗೆ ಅದೇ ಸರಿ) bye! :)

ರಜಾ- ಮಜಾ? ಸಜಾ?!

Exam ಮುಗೀತು , ರಜಾ ಬಂತು! ಆದ್ರೂ SUMMER HOLIDAYS ಲಿ ಸಿಕ್ತಿದ್ ಅ ಮಜಾ, ಖುಷಿ ಇಲ್ಲ. ಹಾಸ್ಟೆಲ್ ಲಿ ಇದ್ ಓದೋರಿಗೆ ಮನೆಗೆ ಹೋಗಿ ಅಮ್ಮನ ಅಡ್ಗೆ ತಿನ್ನೋದ್ ಅಷ್ಟೆ ಖುಷಿ. ಆಮೇಲೆ ಟಿವಿ ಚಾನೆಲ್ change ಮಾಡದೋ ಕಂಪ್ಯೂಟರ್ ಮುಂದೆ ಕೂತು (ಮಲಗಿ) message ಮಾಡ್ತಾ ಸಿನಿಮಾ ನೋಡದೋ .. ಹಿಂಗೆ ಸೋಮಾರಿತನದ ಪರಮಾವಧಿ reach ಆಗೋ ಕೆಲಸ.( ನಿಮ್ ಹತ್ರ ಬೇರೆ ಏನಾದ್ರೂ ಟೈಮ್ ಪಾಸು ಮಾಡೋ ideas ಇದ್ರೆ ನಂಗು ಹೇಳಿ. 6 sem ಇಂದ ಇದೇಮಾಡಿ ಮಾಡಿ ಬೋರ್ ಆಗಿದೆ :( )
ಮುಂಚೆ ಚೆನಾಗಿರೋದು.. ರಜಾ ಬಂದ್ ಕೂಡ್ಲೇ ಅಜ್ಜಿ ಮನೆಗ್ ಹೋಗೋದು.. ಎಲ್ಲಾ ಮಕ್ಳು ಸೇರಿ ಊರ್ ಇಡೀ ದಾಂದಲೆ ಎಬ್ಸೋದು!! ಬೆಳಿಗ್ಗೆ ತಿಂಡಿ ಕಾರ್ಯಕ್ರಮ ಮುಗ್ಸಿ ಗುಡ್ಡ-ಬೆಟ್ಟ ಅಲಿಯೋದು..ಸಳ್ಳೆ ಹಣ್ಣು ಕಿತ್ತು, ನೇರಳೆ ಹಣ್ಣು- ಮಾವಿನ್ ಹಣ್ಣು ಹೆಕ್ಕಿ, ಕವಳಿ ಮಟ್ಟಿಗೆ ಕೈ ಹಾಕಿ ಮುಳ್ಳು ಚುಚ್ಸ್ಕೊಂಡು , ಅಂಗಿ ಎಲ್ಲಾ ಕಲೆ ಮಾಡ್ಕೊಂಡು ತಿನ್ನೋದು! (ಬಾಯಲ್ ನೀರ್ ಬರ್ತಿದೆ ) ಮಧ್ಯಾಹ್ನ ಎಲ್ಲಾರೂ ಪಂಕ್ತಿ ಲಿ ಊಟ ಮಾಡದು, ಬೈಸ್ಕೊಂಡ್ ಮಲಗೋ ನಾಟಕ ಮಾಡೋದು, ದೊಡ್ಡೋರ್ ನಿದ್ದೆ ಮಾಡಿದ ಮೇಲೆ ನಿಧಾನಕೆ ತೋಟಕ್ escape ಆಗೋದು! ಹೋಗಕ್ಕು ಮುಂಚೆ ಹಿತ್ಲಲ ಇರೋ ಸೌತೆ ಕಾಯಿ ಕಿತ್ಕೊಂಡ್ ಹೋಗದು, ತೋಟದಲ್ ಸಂಕದ ಮೇಲ್ ಕೂತು ಉಪ್ಪು ಖಾರ ಹಾಕಕ್ಕೆ! ಆಹಾ! ಹಂಗೆ ಕಿತ್ತಾದ್ಕೊಂಡ್ ತಿನ್ನಕ್ಕೆ ಮಜಾ! ಹೊಳೇಲಿ ಮೈ ಇಡೀ ಒದ್ದೆ ಆಗೊಹಂಗ್ ಆಡ್ತಿದ್ವಿ , ಮನೆಗ್ ಹೋದಮೇಲೆ ಬೈಗಳ ಸಿಗದೆ ಇರ್ಲಿ ಅಂತ ಅಲ್ಲೇ ಬಿಸಿಲಲ್ಲಿ ಬಟ್ಟೆ ಒಣಗೋ ತನಕ ಕುಣಿತಿದ್ವಿ:) ಕೈ ಕಾಲ್ ತೊಳಿಯೊವಾಗ ಮೈ ಕೈಲಿ ಆಗಿರೋ ಗಾಯಗಳು "hi, hello" ಹೇಳಕ್ ಶುರು ಮಾಡೋದು! ಮನೇಲ್ ಹೇಳೋಹಂಗ್ ಇಲ್ಲ ಬಿಡೋ ಹಂಗ್ ಇಲ್ಲ. ಬಿಸಿ ತುಪ್ಪದ್ ಸಂಕಟ! ಇದ್ಕು ದೊಡ್ಡ ಸಂಕಟ ಅಂದ್ರೆ ಊಟಕ್ ready ಆಗೋ ತನಕ ಭಜನೆ ಹೇಳೋದು, ಮಗ್ಗಿ ಹೇಳೋದು, holiday homework ಮಾಡದು :( ಆಮೇಲ್ ಹೊಟ್ಟೆ ತುಂಬ ಬಿಸಿ ಬಿಸಿ ಊಟ, ಸಾಲಾಗ್ ಮಲಗಿ ನೆಮ್ಮದಿಯ ನಿದ್ದೆ :)ಈಗ ನಾವು ಮಕ್ಳ್ ಅಲ್ಲ, summer ಲಿ holidays ಉ ಸಿಗಲ್ಲ, ಜನ ಒಟ್ಟಿಗೆ ಪುರ್ಸೋತ್ತಲ್ ಸೇರದು ಇಲ್ಲ.. ಹಿಂಗೆ sem holidays ಲಿ " आजा बचपन एक बार फिर , देदे अपनी निर्मल शान्ति " ಅನ್ಕೊಂಡು ಕವನನೋ , article ಓ ನನ್ ಥರ blog ಲಿ ಬರಕೊಂಡು time spend ಮಾಡೋದ್ ಅಷ್ಟೆ :(