ಪ್ರತಿ ಭಾನುವಾರ ಮಧ್ಯಾಹ್ನ 1:30 ಕ್ಕೆ !

ಬೇಗ ಶುರುಮಾಡೋದಕ್ಕೆ ಬೇರೆ ಕೆಲಸಗಳು ಮುಗಿದಿರೋದಿಲ್ಲ, ಆಮೇಲೆ ಮಾಡೋದಕ್ಕೆ ಹೊಟ್ಟೆ ಬಿಡೋದಿಲ್ಲ ಪ್ಲಸ್ ಲೇಟ್ ಆಗಿ ಹೋದರೆ ಏನೂ ಉಳಿದಿರೋದಿಲ್ಲ. ಹಾಗಾಗಿ sharp 1:30 ಗೆ ಹಾಜರ್! ತರಕಾರಿ ಇಲ್ಲದೆ ಇರೋ ಪಲಾವೋ, ಡಾಲ್ಡ ಹಾಕಿದ Ghee rice ಓ , ಅದೃಷ್ಟ ಚೆನ್ನಾಗಿದ್ದಾರೆ ಬಿಸಿಬೇಳೆಬಾತೋ , ಯಾವುದೋ ಒಂದು. ಕೊಟ್ಟಿದ್ದು ತಟ್ಟೆಗೆ ಹಾಕಿಕೊಂಡು, ಜೊತೆಗೆ Sunday Special Sweet ತೆಗೆದುಕೊಂಡು, ಒಂದು ಪ್ರಶಸ್ತವಾದ ಜಾಗ ಹುಡುಕಿ ಸಂವಾದಕ್ಕೆ ಕೂರೋದು.

"Green leaf ಒಂದು ಬೇಡ. ಇರೋದೆಲ್ಲ ರುಚಿ ನೋಡಿ ಆಗಿದೆ."

"Rasoi?"
"ಅಯ್ಯೋ! ಮೊನ್ನೆ ನಾನು classmates ಜೊತೆ ಹೋಗಿದ್ದೆ. ಏನ್ ಏನೂ ಚೆನಾಗಿಲ್ಲ. ಬೇಡ"
"ಹೌದೆ, chef change ಆದಮೇಲೆ ಏನೂ ಉಪಯೋಗ ಇಲ್ಲ"

"Indra`s ಗೆ ಹೋದ್ರೆ?"
"ಏಹೆ! ಅದೆಂಥ ಹೋಟ್ಲು? ನಾನೇ ಅದಕಿಂತ ಚೆನಾಗ್ ಮಾಡ್ತೀನಿ"

"Veg park ಗೆ ಹೋಗಣ? ಸುಮಾರ್ ದಿನ ಆಯ್ತು.."
"ಆ cashier stare ಮಾಡಿ ಮಾಡಿ ಇಡ್ತಾನೆ. ರಗಳೆ. ಸಂತೋಷವಾಗಿ ತಿನ್ನಕ್ಕು ಆಗಲ್ಲ, ಬೇಡ ಕಣೆ"

"Authana ಹೊಗಣ್ರೆ , ನಾನ್ ಹೋಗೆ ಇಲ್ಲ, garden restaurant ಇದ್ಯಂತೆ.. "
"ಸಂಜೆ ಆದ ತಕ್ಷಣ ಸೊಳ್ಳೆ ಅಂದ್ರೆ ಸೊಳ್ಳೆ ಆ garden ಲಿ. ಜೊತೆಗೆ ಒಂದು ಗಂಟೆ ಅವನು serve ಮಾಡಕ್ಕೆ. 8:30 ಒಳಗೆ ಬರಕ್ ಆಗಲ್ಲ"

"ಅದರ ಎದುರಿಗೆ ಮತ್ತೊಂದು ಇದಿಯಲ .. ಅದು?"
"Sixth main ಆ? "
"butter naan ಮತ್ತೆ mint lime juice ಬಿಟ್ರೆ ಬೇರೆ ಏನ್ ಚೆನಾಗಿದೆ ಹೇಳು ಅಲ್ಲಿ?"

"Chinese ತಿನ್ನಣಾ?"
"ಆ mezzulana ಲಾ?"
"ಆ uncle ದು ಕಾಟ! ನಮಗೆ choose ಮಾಡಕ್ಕೆ ಬಿಡಲ್ಲ. ನೆನಪಿಲ್ವಾ? ಅವರೇ 'ಇದು ಚೆನಾಗಿದೆ' ,'ಅದು ಚೆನಾಗಿದೆ', 'ಇದರ ಜೊತೆಗೆ ಅದು ತೆಗೊಳ್ಳಿ' ಅನ್ಕೊಂಡು... ಬೇಡ್ವೆ"

"Cindrella mess ಇದೆ ಅಲಾ..."
"ಅಲ್ಲಿ ಕೂತು ತಿನ್ನೋದಕ್ಕೆ ಆಗಲ್ಲ, ಹೊರಗಡೆ ಹುಡ್ಗುರು ಸಿಗರೇಟು ಸೇದುತ್ತ ಇರ್ತಾರೆ. parcel ಎ ತರಬೇಕು. ಇಲ್ಲಿಗೆ ಬರೋಹೊತ್ತಿಗೆ ತಣ್ಣಗಾಗತ್ತೆ. "

"ಬೇರೆ ಯಾವ ಜಾಗ ಇದೆ ಹೇಳು KD ಲಿ? "
"Top stuff, Tao, Casino..."
"ಅದನ್ಯಾಕೆ ಹೇಳ್ತ್ಯ? veg & non veg. ಅವಳು ಬರಲ್ಲ ಅಂತ ಗೊತ್ತಿಲ್ವಾ? "
"ಕೇಳಿದಕ್ಕೆ ಹೇಳಿದ್ದು ನಾನು"

"ಹೋಗ್ಲಿ, ಇನ್ನೇನ್ ಇದೆ ಆ ರಸ್ತೆ ಲಿ...? ....temptation!"
"ಅವನು home delivery ನೆ ಮಾಡ್ತಾನೆ . ಅಲ್ಲಿ ತನಕ ಯಾಕೆ ಹೋಗ್ಬೇಕು?"
"ಅದೂ ಸರಿ, ಅನ್ನನು ಗಟ್ಟಿ ಗಟ್ಟಿ ಅಲ್ಲಿದು."

"how abt pizza hut & Dominos?"
"ಹೋಗೆ, ಆ ಬ್ರೆಡ್ ತುಂಡಿನ ಮೇಲೆ ನಾಕು piece ತರಕಾರಿ ಉದುರಿಸಿ, cheese ಹಾಕಿದ ಹಂಗೆ ಮಾಡಿ ಕೊಡ್ತಾನೆ. ಅದಕ್ಕೆ ಅಷ್ಟೆಲ್ಲಾ ದುಡ್ಡು ಬೇರೆ! ಮನೇಲೆ ಮಾಡಿ ತಿನ್ಬಹುದು ಅದಕ್ಕಿಂತ. ಮೊನ್ನೆ ಮನೆಗೆ ಹೋದಾಗ......"
"ಆಯ್ತು!!!! ಸಾಕು!! cancel ಅದು"

"KD ಲಿ ಸರಿಯಾದ ಹೊಟ್ಲೆ ಇಲ್ವಾ?"
"ಎಲ್ಲದರಲ್ಲೂ ಒಂದ್ ಒಂದ್ problem ನಮಿಗೆ "

"hey! ಕುವೆಂಪು ನಗರದ ಕಡೆ ಸುಮಾರ್ ಇದೆ. ಅಲ್ಲಿಗೆ ಹೋಗಬಹುದು"
"ಯಾವುದ ಇದೆ ಹೇಳು ಗೊತ್ತಿರೋದು? ಹಳ್ಳಿ ಮನೆ, Khana khazana, Refuel, KBC......."
"ಹೋಗೋದು ಬರೋದು ಹೆಂಗೆ ಹೇಳು? ಆ side ಬಸ್ಸೇ ಇಲ್ಲ ಇಲ್ಲಿಂದ ಸರಿಯಾಗಿ. ಆಗಲ್ಲ ಅದೆಲ್ಲ "

"City ಗೆ ಬಸ್ ಇದೆ , ಆದ್ರೆ ಅಲ್ಲಿ ತನಕ ಊಟಕ್ಕೆ ಅಂತ ಹೋಗೋದಕ್ಕೆ ಬೇಜಾರು.."

(ಅಷ್ಟು ಹೊತ್ತಿಗೆ ತಟ್ಟೇಲಿ ಇದ್ದ special ಊಟ ಮುಗಿದಿರೊತ್ತೆ)

"ಬಿಡು, ನಮಿಗೆ Green leaf ಎ ಸರಿ. ಹತ್ರನೂ ಆಗತ್ತೆ, ರುಚಿನು ಇದೆ, price ಗೆ ತಕ್ಕ quantity ನೂ ಕೊಡ್ತಾನೆ.ಅಲ್ಲಿಗೆ ಹೋಗಣ"



PS: ಇದು... ಹೆಚ್ಚು ಕಡಿಮೆ ನಾಲ್ಕು ವರ್ಷ, ನಾನು ಮೈಸೂರಿನಲ್ಲಿ hostel ಲಿ ಇರೋವಾಗ , ಪ್ರತಿ ಭಾನುವಾರ ಮಧ್ಯಾಹ್ನ ಊಟದ ಸಮಯದಲ್ಲಿ ನಡಿತಾ ಇದ್ದಿದ್ ಸಂಭಾಷಣೆ. ನಮಗೆ ಭಾನುವಾರ ರಾತ್ರಿ ಮೆಸ್ಸ್ ಇರ್ತಾ ಇರ್ಲಿಲ್ಲ. ಹೊರಗಡೆ ಹೋಗಿ ತಿನ್ನಬೇಕಿತ್ತು. ರಾತ್ರಿ 8:30 ಒಳಗೆ ವಾಪಾಸು ಬರಬೇಕಿತ್ತು. ಅದಿಕ್ಕೆ ಈ ಚರ್ಚೆ. ಸುಮಾರಿಗೆ ಇದೇ Dialogue ಗಳನ್ನೇ ಆಡ್ತಾ ಇದ್ವಿ ಪ್ರತಿ ಸಲನು :)
ಇದು engineering ಮುಗಿಸಿ, hostel ಬಿಟ್ಟು ಬಂದ ಮೇಲಿನ ಮೊದಲ ಭಾನುವಾರ ಮಧ್ಯಾಹ್ನ . ಊಟಕ್ಕೆ ನಾನು, ಅಮ್ಮ ಮಾತ್ರ . ರಾತ್ರಿ ಊಟಕ್ಕೆ ಮನೆ kitchen off ಇಲ್ಲ. so, ಹೋಟೆಲ್ ಹುಡುಕೋ ಅಗತ್ಯ ಇಲ್ಲ! :)

8 Response to "ಪ್ರತಿ ಭಾನುವಾರ ಮಧ್ಯಾಹ್ನ 1:30 ಕ್ಕೆ !"

  1. Laxman (ಲಕ್ಷ್ಮಣ ಬಿರಾದಾರ) Says:

    Tumab chennagide ri. nimma sunday Utada tayari. Ella hotelana parichaya nanage aytu barita iri

  2. Prabhuraj Moogi Says:

    ಬಹಳ ದಿನಗಳ ನಂತರ ಮತ್ತೆ ಕಾಲೇಜಿನ ಚಿತ್ರಾನ್ನದೊಂದಿಗೆ ಮರಳಿ ಪ್ರಯತ್ನ ಮಾಡಿದ್ದೀರಿ... ಪ್ರತೀ ಹೊಟೇಲಿಗೂ ಕೊಟ್ಟ ಕಾರಣಗಳು ವಿಭಿನ್ನವಾಗಿ ಬಹಳ ಚೆನ್ನಾಗಿದೆ, ನಿಮಗೆ ಆಡಿಕೊಂಡು ನಗೋಕಾದ್ರೂ ನಾಲ್ಕಾರು ಹೊಟೇಲುಗಳಿದ್ವು ನಾ ಕಲಿತಲ್ಲಿ, ಇದ್ದಿದ್ದೇ ಎರಡು, ಒಂದು ಪರವಾಗಿರಲಿಲ್ಲ, ಅದಕ್ಕೆ ಇಂಥ ಸಂಭಾಷಣೆಗಳು ಆಗ ಮಾಡಿರದಿದ್ರೂ ಈಗ್ ಬೆಂಗಳೂರಿನಲ್ಲಿ ಮಾತ್ರ ಹೀಗೆ ಅನ್ನುತ್ತಿರುತ್ತೇವೆ...

  3. shivu.k Says:

    ಗ್ರೀಷ್ಮಾ ಮೇಡಮ್,

    ಇಂಥ ಸಂಭಾಷಣೆಗಳು ನನಗೇ ತುಂಬಾ ಇಷ್ಟವಾಗುತ್ತೆ...ಏಕೆಂದರೆ ನಾವು ಹುಡುಗರು ಮಾಡೋದು ಹೀಗೇ ಅಲ್ವಾ...[ ಸ್ವಲ್ಪ ಶೈಲಿ ಬೇರೆ ಇರುತ್ತೆ..]
    ನಿಜಕ್ಕೂ ಇಂಥವು ಮಜ ಕೊಡುತ್ತೆ..

  4. Ittigecement Says:

    ಗೀಷ್ಮಾ....

    ನನ್ನ ಕಾಲೇಜಿನ ದಿನಗಳು ನೆನಪಾಯಿತು...

    ನಾವೇ ಅಡಿಗೆ ಮಾಡಿಕೊಳ್ಳುತ್ತಿದ್ದೇವು.
    ಹಸಿವಾದರೆ ತಿನ್ನಲಿಕ್ಕೆ ಏನೂ ಇರುತ್ತಿರಲಿಲ್ಲ....

    "ಮೊಸರು ಇದ್ದಿದ್ದರೆ ಅವಲಕ್ಕಿ ಮೊಸರು.. ತಿನ್ನಬಹುದಿತ್ತು... ಮಾರಾಯ್ಯ...
    ಅವಲಿಕ್ಕಿನೇ....ಇಲ್ಲವಲ್ಲೋ"

    ಅಂತ ಜೋಕ್ ಮಾಡಿಕೊಳ್ಳುತ್ತಿದ್ದೆವು....

    ಚಂದದ ಬರಹ....

    ಅಭಿನಂದನೆಗಳು...

  5. Greeshma Says:

    @ Laxman
    thanks, mysore ge hodaaga omme hogi banni green leaf ge ;)

    @ ಪ್ರಭು ಸರ್,
    ಇಷ್ಟು ದಿನ ಪರೀಕ್ಷೆ ಅಂತ ಸ್ವಲ್ಪ busy ಇದ್ದೆ. ಹಾಗಾಗಿ ಬರಿಯೋದಕ್ಕೆ ಆಗಲಿಲ್ಲ.
    anyways, ನಾನು ಮೈಸೂರಂತ ಊರಲ್ಲಿ ಇದ್ದ ಕಾರಣ ಇಷ್ಟೊಂದು options ಇತ್ತು ಆಗ. ನಿಮ್ಮ ಆ ದಿನಗಳ ಹಾಗೆ ನನಗೆ ಶಿವಮೊಗ್ಗದಲ್ಲೂ ಈಗ ಆಡಿಕೊಳ್ಳೋದಕ್ಕೆ ಸರಿಯಾದ ನಾಲ್ಕು ಹೋಟೆಲ್ಲುಗಳಿಲ್ಲ.

    @ ಶಿವೂ ಸರ್ ,
    ಈಗ ನೆನಪಿಸಿಕೊಲ್ಲೋದಕ್ಕೆ ಮಜಾ ಆಗುತ್ತೆ :) ಆಗ ಪ್ರತಿ ಭಾನುವಾರ ಒಂದೇ ಹೋಟೆಲ್ಲಿಗೆ ಹೋಗೋದಕ್ಕೆ ಎಷ್ಟು ರಗಳೆ ಆಗೋದು!

    @ ಪ್ರಕಾಶಣ್ಣ,
    ಹ್ಹ ಹ್ಹ ! ಪರವಾಗಿಲ್ಲ, ನೀವು ಆಗ್ಲೇ ಅಡಿಗೆ ಮಾಡ್ಕೋತಾ ಇದ್ರಿ! ನಾವೂ illegal electric stove ಇಟ್ಟುಕೊಂಡು, ಕೆಲವು ಸಲ ಅಡಿಗೆ ಮಾಡ್ತಾ ಇದ್ವಿ :)

  6. ಶ್ರೀನಿಧಿ.ಡಿ.ಎಸ್ Says:

    not u missing tht?:) welcome to bengalooru.

  7. Unknown Says:

    ತುಂಬಾ ಹೋಟೆಲ್ಗಳು ಇರೋವಾಗ ಎಲ್ಲಿಗೆ ಹೋಗ್ಬೇಕು ಅನ್ನೋದೇ ದೊಡ್ಡ ಪ್ರಾಬ್ಲೆಮ್ಮು :)
    ಬೆಂಗಳೂರಿನಲ್ಲಿ ತುಂಬಾ ಕಷ್ಟ :)

  8. Jabir Ahmed Says:

    Very Nice yaar...
    Hostel Life ROCKS :-)