ಬ್ಲಾಗ್ ಲೋಕಕ್ಕೆ ಹೊಸಬಳು ನಾನು. ಮಾತು ಸಾಕಷ್ಟು ಆಡ್ತಿನಿ.. ವಾದ ಬೇಕಷ್ಟು ಮಾಡ್ತೀನಿ.. ಆದರೆ ಬರೆಯೋ ಪ್ರಯತ್ನ ಇದೇ ಮೊದಲು. ಸುಮಾರ್ ಸಲ ಅಣ್ಣ "ಬ್ಲಾಗ್ ಬರಿ" ಅಂದಾಗ.. "ಕಷ್ಟದ್ ಕೆಲ್ಸಾ" "ಆಗಲ್ಲ" "ಪುರುಸೊತ್ತಿಲ್ಲ" ""ವಿಷ್ಯ ನೇ ಸಿಗಲ್ಲ" ಅಂತೆಲ್ಲಾ ಕಾರಣ ಕೊಟ್ಟು ತಪ್ಪಿಸ್ಕೊಣ್ಡಿದಿನಿ. ಆದರೆ ಈಗ ಒಂದ್ ತಿಂಗಳು ಆಯ್ತು ಬರಿಯಣ ಅಂತ ಅನ್ಸಕ್ ಶುರುಆಗಿ.. ಪ್ರಾಯಶಃ ಮೊನ್ನೆ ಮೊನ್ನೆ ಕಾಲೇಜಿನಲ್ಲಿ ನಡೆದ 'ಶಬ್ಡ್'' ಉತ್ಸವದ 'ಕನ್ನಡ ಜಾಮ್' ಹಾಗೂ ಇತ್ತೀಚೆಗೆ ಹೆಚ್ಚಾದ ಕನ್ನಡ ಕಾದಂಬರಿಯ ಹುಚ್ಚು ಹೀಗ್ ಅನ್ಸಕ್ಕೆ ಕಾರಣ.ಕನ್ನಡ ಓದೋದು, ಬರಯೋದು ಇಂಜಿನೀಯರಿಂಗ್‌ಗೆ ಬಂದಮೇಲೆ ಬಹಳ ಕಡಿಮೆ ಆಗಿರೋದರಿಂದ ತಪ್ಪುಗಳು ಸಾಕಷ್ಟು ಆಗ್‌ಬಹುದು, ತಪ್ಪಾದಲ್ಲೆಲ್ಲಾ ತಿದ್ದಿ, ನನ್ನ ಪ್ರಥಮ ಪ್ರಯತ್ನವನ್ನು ಪ್ರೋತ್ಸಾಹಿಸಿ :)