ಬೆಳಿಗ್ಗೆ newspaper ಗಾಗಿ ಟಿಪಾಯಿ ಮೇಲೆ ಕೈ ಆಡಿಸೋವಾಗ ರಾಮಾಯಣ/ಮಹಾಭಾರತ ಪರೀಕ್ಷೆಯ (ತಮ್ಮ ರಾಮಾಯಣ ಪರೀಕ್ಷೆ ಕಟ್ಟಿದ್ದ) question paper ಸಿಕ್ಕಿತು. PUC ಪಾಠ ನೆನಪಿರೋ ಹಾಗೆ ಇದೂ ನೆನಪಿರುತ್ತೆ ಅಂತ ಓದಲು ಶುರು ಮಾಡಿದೆ. ಎರಡೇ ಪ್ರಶ್ನೆ.. ಆಮೇಲೆ ಉತ್ತರ ಹೊಳೆಯಲಿಲ್ಲ! ಜೋರಾಗಿ ಓದಲು ಶುರು ಮಾಡಿದೆ. ಅಪ್ಪ ಅಮ್ಮನೂ ಈ ಪ್ರಶ್ನಾವಳಿಯಲ್ಲಿ ಭಾಗವಹಿಸಲಿ ಎಂದು (actually ನನಗೆ ಮಾತ್ರ ಅಲ್ಲ ಮರೆತು ಹೋಗಿರೋದು ಅಂತ ಸಮಾಧಾನ ಮಾಡಿಕೊಳೋದಕ್ಕೆ). ಆದರೆ ಪ್ರಶ್ನೆ ಓದಿ ಮುಗಿಯುತ್ತಿದ್ದಂತೆ ಅಪ್ಪ ಉತ್ತರಿಸಲು ಶುರು ಮಾಡಿದರು! ನನಗೆ complex ಆಗಲು ಶುರು ಆಯಿತು. "ಅರೆ! ಮಹಾಭಾರತ ಪರೀಕ್ಷೆ ಲಿ 91 ಬಂದಿದ್ದು ನಂಗೆ. ಅಪ್ಪ ಎಷ್ಟ್ ಚೆನಾಗ್ ಉತ್ತರ ಹೇಳ್ತಾ ಇದಾರಲ! " ಎಂದು. ಅವರು ready ಆಗಿ office ಗೆ ಹೋಗೋ ತನಕ ಕಾದು, ಮತ್ತೆ ಮುಂದುವರೆಸಿದೆ. ಕಾರಣ ಅಮ್ಮನೂ ನನ್ನಂತೆ ಉತ್ತರಕ್ಕಾಗಿ ತಡಕಾಡುತ್ತಿದ್ದರು ;) ಯಾವುದೋ ಒಂದು ಪ್ರಶ್ನೆಯ ಉತ್ತರಕ್ಕೆ ಪಾಂಡವರ ದಾಯಾದಿಗಳ ಹೆಸರು ಬೇಕಿತ್ತು. ನನಗೆ ನೆನಪಾಗಬಾರದೆ! "ಕೌರವರೂ" ನೆನಪಾಗದೆ ಇರೋ ಅಷ್ಟು ಮರೆತು ಹೋಗಿದೆಯೇ ನನಗೆ?! ಪುನಃ ಓದುವ ಕಾಲ ಬಂದಿದೆ ಅಂತ confirm ಆಯಿತು. ಕಿಶೋರ ಭಾರತ ಹಿಡಿಯಲು ಹೊರಟೆ (ಹೌದು. ನನ್ನ levelಗೆ ಅದೇ ಸರಿ) bye! :)
ದೃಶ್ಯ ಮಾಧ್ಯಮ-ಏನಿದೆ ಒಳಗಡೆ?
7 years ago
January 31, 2009 at 5:24 PM
ಓದು, ಓದು.. ಆನು ಒಂದರಿದೇ ಮಹಾ ಭಾರತ ಓದಿದ್ದಿಲ್ಲೆ.
ಓದಿ summarize ಮಾಡಿ ಎನಗೆ ಹೇಳು :P
February 1, 2009 at 12:13 AM
@ ಜ್ಯೋತಿ
ಎನ್ನದಾದ ನಂತರ ಕಿಶೋರ ಭಾರತ next ನಿನಗೆ! ;)
February 3, 2009 at 9:47 PM
ಬ್ಲಾಗ್ ಲೋಕಕ್ಕೆ ಸ್ವಾಗತ!
ರೀ ಮೇಡಂ...ನಾನಂತೂ ಒಪ್ಪೋಲ್ಲ..ಕೌರವರ ಹೆಸರೂ ಮರೆತಿದ್ದೀರಾ ಅಂದ್ರೆ...
ಮಹಾಭಾರತ ಓದದವರೂ ಇದಕ್ಕೆ ಥಟ್ ಅಂಥ ಹೇಳ್ತಾರೆ!
ಪ್ರಾಮಾಣಿಕವಾಗಿ ನಿಮ್ಮ ನೆನಪಿನ ಶಕ್ತಿ ಬಗ್ಗೆ ಹೇಳಿದ್ದೀರಲ್ಲಾ!
ಮೈಸೂರಿನ ಅನುಭವಗಳನ್ನೂ ಬರೆಯುತ್ತಿರಿ
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/
February 4, 2009 at 7:55 PM
ಧನ್ಯವಾದಗಳು ಅಶೋಕ್,
ಅಷ್ತೆಲ್ಲ್ಲ ಪ್ರಶ್ನೆಗಳಿಗೆ ಉತ್ತರ ಬಾರದೆ ಇರೋ tension ಲಿ ಕೌರವರು ಮರತೇ ಹೋಗಿದ್ರು ಕಣ್ರೀ !
February 9, 2009 at 6:53 PM
:) ಕರ್ಮಕಾಂಡ!ಕ್ಲಾಸ್ ತಗಳಕಾತು ಹಾಂಗರೆ !
ಬರಿಯ ಶೈಲಿ ಚೊಲೋ ಇದ್ದು,ವೆಲ್ಕಮ್ಮು...
February 14, 2009 at 11:43 AM
ಮೇಡಮ್,
ನಿಮ್ಮ ಆಯ್ಕೆ ಸರಿ....ನಾವು ಅಲ್ಲಿಂದ ಓದಲು ಶುರುಮಾಡಿದಾಗಲೇ ಮಜಾ ಹೆಚ್ಚು...
February 15, 2009 at 12:54 AM
@ಶ್ರೀನಿಧಿ
ಅಣ್ಣಾ, ಸಿಗು, ನೋಡ್ತಿ ನಿಂಗ್ ಎಷ್ಟ್ ಮಹಾಭಾರತ ಗೊತಿದು ಅಂತ ;)
@shivu sir
ಭಾರತ ಸಂಸ್ಕೃತಿ ಪ್ರತಿಷ್ಠಾನದ ಈ ಪುಸ್ತಕದಲ್ಲಿ ಮಹಾಭಾರತನ ತುಂಬಾ ಚೆನ್ನಾಗಿ, ಸಂಸ್ಕ್ಷಿಪ್ತವಾಗಿ ವಿವರಿಸಿದ್ದಾರೆ. ಜೊತೆಗೆ, ಹಿಂದೊಮ್ಮೆ ಪರೀಕ್ಷೆಗಾಗಿ ಓದಿದ ಪುಸ್ತಕನ ಈಗ ಸುಮ್ಮನೆ ಓದಕ್ಕೆ ಇನ್ನೂ ಮಜಾ :)
March 23, 2009 at 7:57 AM
ಆ ಕ್ವೆಶ್ಚನ್ ಪೇಪರನ್ನು ನನಗೂ ಕಳಿಸಿಕೊಡಿ. ನಾನು ಪರೀಕ್ಷಿಸಿಕೊಳ್ಳುತ್ತೇನೆ ನನಗೆಷ್ಟು ನೆನಪಿದೆ. ಇಲ್ಲದಿದ್ದರೆ ಇದ್ದೇ ಇದೆಯಲ್ಲಾ ಕಿಶೋರ ಭಾರತ:)