CieSta 09


Even ಸೆಮಿಸ್ಟರ್ ಅಂದರೆ event ಗಳ ಸೆಮಿಸ್ಟರ್. ಎಲ್ಲಾ ಬ್ರಾಂಚುಗಳದ್ದು , ಕಾಲೀಜಿನದ್ದು, ಅಸೋಸಿಯೇಷನ್ ಗಳದ್ದು, ಹೀಗೆ ವಾರಾಂತ್ಯದಲ್ಲಿ ಒಂದಲ್ಲ ಒಂದು fest ಇದ್ದೇ ಇರುತ್ತೆ . ಈಗೊಂದು ಎರಡು ವಾರಗಳ ಹಿಂದೆ ನಮ್ಮ ಬ್ರಾಂಚಿಂದು fest ಮಾಡೋಣ ಅಂತ ಆಯ್ತು (ಕೊನೆ ಸೆಮಿಸ್ಟರ್ ಅಂದ್ರೆ ಹೀಗೆ, ಮಜಾ ಮಾಡೋಕೆ ಪ್ರತಿ ದಿನ ಒಂದೊಂದು ನೆಪ ಹುಡುಕೋದು). ಎಲ್ಲಾರಿಗೂ ಹುರುಪು. 3- 4 ವರ್ಷಗಳ ನಂತರ ಈ ಪ್ರಯತ್ನ ನಡಿತಾ ಇರೋದು. ಇದಾದ ಎರಡೇ ದಿನದಲ್ಲಿ cancel ಆಯ್ತು ಅಂತ ಸುದ್ದಿ. ಆಗತ್ತೆ, ಆಗಲ್ಲ, ಎ ಮದ್ಯೆ ತೂಗುತ್ತಾ ಇತ್ತು. ಕೊನೆಗೊಂದು ದಿನ ಪರ್ಮಿಶನ್ ಅಂತು ಸಿಕ್ಕಿತು. ಜೊತೆಗೆ ದಿನ ಕೂಡ ಅವರೇ ನಿಶ್ಚಯ ಮಾಡಿ ಕೊಟ್ಟಿದ್ರು. 28,29 ಅಂತ. 24 ಕ್ಕೆ ಇಂಟರ್ನಲ್ಸ್ ಮುಗಿಯುತ್ತೆ , 27 ಯುಗಾದಿ. ಜನ ಒಟ್ಟು ಮಾಡೋದೇ ದೊಡ್ಡ ಸಮಸ್ಯೆ ಆಗಿತ್ತು. ನಾವು ಬಿಡಿ ಬಂಡ ಜಾತಿ, internals ಗೆಲ್ಲಾ ಹೆದರೋಲ್ಲ. ಆದರೆ 2 ನೇ, 4 ನೇ ಸೆಮಿಸ್ಟರ್ ಮಕ್ಕಳಿಗೆ ಇನ್ನು ಬಂಡತನ ಬಂದಿಲ್ವೆ. 3-4 ಸಲ ಸಭೆ ಕರೆದರೂ ಅವರಾರೂ ಪತ್ತೇನೆ ಇಲ್ಲ! ಪರ್ಮಿಶನ್ ಜೊತೆ ಹಣ involve ಮಾಡದೆ fest ಮಾಡಬೇಕು ಅಂತನೂ ತಾಕಿತು ಮಾಡಿದ್ರು. ಅಲ್ಲಾ, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಅಂದರೆ ಒಂದು ಸೇರು ಅಕ್ಕಿ ಕೊಡಿ, ಬಹುಮಾನವಾಗಿ ಒಂದು ಮೂಟೆ ತಗೊಂಡು ಹೋಗಿ ಅಂತ ಹೇಳಕ್ಕಾಗತ್ತಾ? ಈ recession ಕಾಲದಲ್ಲಿ sponsorship ಸಿಗೊದೇನೋ ಕಷ್ಟವೇ ಅನ್ನಿ. ಆದರೂ.... ಬಿಡಿ, HOD ಹೇಳಿ ಆಗಿತ್ತಲ್ಲ, ಮೀರೋದಕ್ಕಾಗಲ್ಲ. ನಾವೇ ಒಂದಿಷ್ಟು ಜನ ಹಣ ಹಾಕಿ minimum bugdet ನಲ್ಲಿ ಮಾಡೋದು ಅಂತ ಆಯ್ತು (ಇದಕ್ಕೂ ಅವಕಾಶ ಇರಲಿಲ್ಲ. "ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ" ಅಂತ ಹೇಳಿ ಮಾಡಿದ್ದಾಯ್ತು).

ಎಲ್ಲಾರ ಹತ್ರ ಹೋಗಿ "ಬನ್ನಿ", "ಮನೆಗೆ ಹೋಗಬೇಡಿ", "ಹೋದ್ರು, ವಾಪಾಸು ಬನ್ನಿ" ಅಂತ ಹೇಳಿದ್ದಾಯ್ತು. ಕೆಲಸಗಳನ್ನ ಹಂಚಿಕೊಂದಿದ್ದಯ್ತು. ಕೆಲಸ ಮಾಡೋಕೆ ಇದ್ದದ್ದು 8-10 ದಿನಗಳು ಮಾತ್ರ. ಅದರಲ್ಲೂ internals ಬೇರೆ! ಮುಕ್ಕಾಲು ವಾಸಿ ಜನಕ್ಕೆ attendance ಇರಲಿಲ್ಲ. ಹಾಗಾಗಿ ಬರಿಯೋ ಕಾಟ ತಪ್ಪಿತು ;) ಕೆಲಸ ಬಿರುಸಿನಿಂದ ಆರಂಭವಾಯಿತು. CieSta ಅಂತ ನಾಮಕರಣವೂ ಆಯಿತು.Siesta ಎಂದರೆ ಯಾವುದೋ ಭಾಷೆಯಲ್ಲಿ ನಿದ್ದೆ ಎಂದರ್ಥ. ಆದರೂ "Ciesta sounds like fiesta" ಮತ್ತು C ಮತ್ತು S ಈ ಎರಡೂ ಅಕ್ಷರಗಳಿವೆ ಎಂದು ಇದನ್ನೇ ಇಟ್ಟಿದ್ದಾಯಿತು. ಬಣ್ಣ ಬಣ್ಣದ, ಚಿತ್ರ ವಿಚಿತ್ರವಾದ posters ತಯಾರಾದವು, ಕಾಲೇಜಿನ ಗೋಡೆಗಳ ಮೇಲೆ ರಾರಾಜಿಸಿದವು.

ಬೆಳಿಗ್ಗೆ ಸಂಜೆ ಮೀಟಿಂಗು, ರಿಹರ್ಸಲ್ಲುಗಳು, ಕಾಲೆಯುವಿಕೆ, photosessionnu ಮಾಡುತ್ತಾ, CS ಹಬ್ಬಕ್ಕೆ ಸಜ್ಜಾದೆವು. ಶನಿವಾರ ಮಧ್ಯಾಹ್ನ ಉದ್ಗಾಟನೆ, ಜೊತೆಗೆ ethnic day. ಹುಡುಗಿಯರು ಸೀರೆ, ಹುಡುಗರು ಪಂಚೆ ಉಟ್ಟು, ಓಡಾಡಿದ್ದೇ ಓಡಾಡಿದ್ದು!
ಆ ದಿನ ನಮ್ಮ ಗುರು ವೃಂದದವರಿಗೆ ಒಂದೆರಡು ಸ್ಪರ್ಧೆಗಳಿದ್ದವು. ಏನ್ ಹುರುಪು ಅಂತೀರಾ!! ಮಾರನೇ ದಿನ ವಿಧ್ಯಾರ್ಥಿ ಮಿತ್ರರಿಗೆ ಸ್ಪರ್ಧೆಗಳು. ಇದನ್ನ ಕೇಳಬೇಕಾ? ಹಾರಾಟ, ಕೂಗಾಟ,ಕಿರಚಾಟ, ಸಂಭ್ರಮವೋ ಸಂಭ್ರಮ! ಸಂಜೆ ಪ್ರತಿಭಾ ಕಾರಂಜಿ. ಅಲ್ಲ, ಹೊಳೆಯೇ ಹರಿಯಿತು. ಆಡಿಟೋರಿಯಮ್ ತುಂಬಾ ಜನ ಕಿಕ್ಕಿರಿದಿದ್ದರು. funds ಇಲ್ಲದೇ ಇರೋ festu, ಅದು , ಇದು, ಅಂತ ತಮಾಷೆ ಮಾಡಿದೋರೆಲ್ಲಾ ಬಂದು, ಹಾಡಿಗೆ ತಾಳ ಹಾಕಿ, skit ಗೆ ನಗಾಡಿ, ಡಾನ್ಸ್ ಗೆ ಹೆಜ್ಜೆ ಹಾಕಿ, ನಮ್ಮೊಂದಿಗೆ ಖುಷಿಪಟ್ಟರು :)

ಕೊನೆಗೆ ಮುಗಿತಲ್ಲಾ ಅಂತ ಬೇಜಾರಾದರೂ, ಇಷ್ಟೆಲ್ಲಾ ತೊಂದರೆಗಳ ನಡುವೆಯೂ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೇ ಮಾಡಿ ತೋರಿಸಿದೆವು ಅನ್ನೋ ಸಂತೋಷ, ಹೆಮ್ಮೆ :)

ಹೇಳಲು ಮರತೆ! ಕಹಿ ಹಾಗಲಕಾಯಿ ಜ್ಯೂಸು ಕುಡಿದು, ಒಣಕಟ್ಟೆ ಬನ್ನು ತಿಂದು, ನಮ್ಮಿಬ್ಬರ ಬಗೆಗಿನ ವಿಷಯಗಳನ್ನೋದಿಷ್ಟು ನೆನಪಿಟ್ಟುಕೊಂಡು, ಒಂದಿಷ್ಟು ಸರ್ಕಸ್ಸು ಮಾಡಿ, "ಆಪ್ತಮಿತ್ರ" ರೆಂದು official ಆಗಿ ಘೋಷಿತರಾದದ್ದು ಮತ್ತಷ್ಟು ಸಂತೋಷ ಕೊಟ್ಟಿತು :)

7 Response to "CieSta 09"

  1. Anonymous Says:

    ಈ ಸೀಎಸ್ ಫೆಸ್ಟ್ನಾ ಮೊದ್ಲು ಮಾಡಿದ್ದು ನಮ್ ಬ್ಯಾಚ್ ;) ಅದ್ರಲ್ಲಿ ನಾನು ಎಮ್ಸೀ :O
    ನಿಮ್ಮ ಪ್ರತಿ ಬ್ಲಾಗ್ ಪೋಸ್ಟ್ ಓದ್ದಾಗ್ಲೂ ಕಾಲೇಜ್‍ನಾ ನೆನಪು ಅತಿಯಾಗಿ ಕಾಡುತ್ತೆ.
    ಕೊನೆ ವರ್ಶ ಸೈಬೀರಿಯಾದಲ್ಲಂತು ಸುಮಾರು ಕೆಲ್ಸ ಮಾಡಿದ್ದೆ. ಅದಕ್ಕೆ ಈಗ್ಲೂ ನಂಗೆ ನಮ್ಮ ಬ್ಯಾಚ್ ಹುಡ್ಗರಿಗಿಂತ ಹೆಚ್ಚು ಜೂನಿಯರ್ಸೇ ಪರಿಚಯ. ಈಗ ಅದೆಲ್ಲಾ "ಆ ದಿನಗಳು"!!

  2. ಶಿವಪ್ರಕಾಶ್ Says:

    ಒಹ್..
    ಅಂದಿನ CS Fest ,
    ಇಂದಿನ "CieSta 09" ...
    ನಮ್ಮ auditorium ನೋಡಿ ಕುಶಿ ಆಯ್ತು...

    ಧನ್ಯವಾದಗಳು

  3. shivu.k Says:

    ಗ್ರೀಷ್ಮ ಮೇಡಮ್,

    ನಿಮ್ಮ ಸಿಎಸ್ ಫೆಸ್ಟ್ ಸಕ್ಕತ್ತಾಗಿದೆ....ಇನ್ನೂ ನಿಜವಾಗಿ ಅದನ್ನು ಅನುಭವಿಸಿರುವ ನೀವು ಎಂಥ ಮಜಾ ಮಾಡಿರಬಹುದು.....
    ಇನ್ನಷ್ಟು ಇಂಥವು ಬರಲಿ....
    ಧನ್ಯವಾದಗಳು...

  4. Prabhuraj Moogi Says:

    ಕಾಲೇಜಿನ ಆ ಫಂಕ್ಷನ್ನುಗಳೆ ಹಾಗೆ, ಅರೇಂಜಮೇಂಟ ಮಾಡೊದರಲ್ಲಿ ಸಾಕು ಸಾಕಾಗಿ ಹೋಗುತ್ತದೆ, ಕಾಲೇಜಿನ ಏಥನಿಕ ಡೇಗಳಲ್ಲಿ ಭಾಗವಹಿಸಿಲ್ಲದ ಕೊರಗು ನನಗೆ ಇದ್ಡೆ ಇದೆ..

  5. Anonymous Says:

    ಎಷ್ಟು ಮಜಾ ಇರ್ತು fest ಹೇಳಿರೆ.
    ಯೆಂಗಳೂ ಎರಡು fest ನೋಡಿದ್ದೆಯ. ಆಗ CS fest full zooom!
    ಬೇರೆ branch ಇಂದ ಬಂದು ಕುರ್ಚಿ ಎಲ್ಲ ಮುರ್ದು ಹಾಕಿ ಎಂಥಲ್ಲ ಗೌಜಿ ಮಾಡಿತ್ತವು.
    ನಿಂಗಳೂ ಒಳ್ಳೆ ಗಮ್ಮತು ಮಾಡಿದ್ದಿ ಕಾಣ್ತು.

  6. ಶ್ರೀನಿಧಿ.ಡಿ.ಎಸ್ Says:

    ಆದ್ರೂ, ಗಮನಿಸಬೇಕಾದ ಅಂಶವೆಂದರೆ, ಫೋಟೋದಲ್ಲಿ ನೀನಿಲ್ಲ:)

  7. Greeshma Says:

    @createam
    ಒಹ್! First CS fest MC ಪರಿಚಯ ಆಯ್ತು! ಸಂತೋಷ :)
    ಬಾರಿ ಚುರುಕು ಅನ್ಸತ್ತೆ ನೀವು, ಆ ದಿನಗಳಿಂದಲೂ junior ಹುಡುಗಿಯರ ಪರಿಚಯ ಮಾಡಿಕೊಳ್ಳೋದರಲ್ಲಿ ನಿಪುಣರು ;) (offensive ಆಗಿ ತಗೋಬೇಡಿ, ತಮಾಷೆ ಅಷ್ಟೇ )

    @ಶಿವಪ್ರಕಾಶ್
    ಹೌದು, ಮೂರು ವರ್ಷಗಳ ನಂತರ "old wine in a new bottle" :)

    @shivu sir
    ಹೌದು ಸರ್, ಸರಿ ಮಜಾ ಮಾಡಿದೀವಿ :)
    @prabhu sir
    ತಯಾರಿ ಮಾಡಿ ಸಾಕಾಗೋದು ನಿಜ, ಆದರೆ ಅದು success ಆದಾಗ ಆಗೋ ಖುಷಿ ಎಲ್ಲವನ್ನು ಮರೆಸುತ್ತೆ!

    @ಜ್ಯೋತಿ
    ಎಂಗಳು ಸರಿ ಗಮ್ಮತ್ತು ಮಾಡಿದ್ದೆಯ. ಕುರ್ಚಿ ಮುರಿವಷ್ಟು ಅಲ್ಲ ;)ಈಗ ಬೇರೆ ಬ್ರಾಂಚ್ fest ಗೂ ಹೋಗಿ ಗಮ್ಮತ್ತು ಮಾಡ್ತಾ ಇದ್ದೆಯ.

    @ಶ್ರೀನಿಧಿ ಅಣ್ಣ,
    observation ಅಡ್ಡಿಲ್ಲೆ ನಿಂದು! ನಾ ಹಿಂದಕ್ಕಿದ್ದಿದಿ ಹಂಗಾಗಿ ಕಾಣ್ತಾ ಇಲ್ಲೇ