ನಮ್ಮ ಹಾಸ್ಟೆಲ್ ನ warden ಕನ್ನಡ ಪ್ರಾಧ್ಯಾಪಕಿ. ಒಂದು ಎರಡನೇ ಸೆಮಿಸ್ಟರ್ ಮಕ್ಕಳಿಗೆ ಕನ್ನಡ ಪಾಠ ಮಾಡುವುದರ ಜೊತೆಗೆ ಹಾಸ್ಟೆಲ್ ನ resident warden ಕೆಲಸವನ್ನೂ ನಿರ್ವಹಿಸುತ್ತಾರೆ. ಕೋಪ ಬಂದರೆ ಕನ್ನಡ ಒಳ್ಳೇ ಪದಗಳು ಮರೆತು ಹೋಗುತ್ತದೆ. ಇರ್ಲಿ ಬಿಡಿ, ಅದೆಲ್ಲಾ ಬೇಡ ಈಗ. Anyways ಹಾಸ್ಟೆಲ್ ಲಿ ಇರುವ ನೂರಾರು rules ಗಳ ಪೈಕಿ 8 ರಿಂದ ೮ ೩೦ ಒಳಗೆ ಹಾಜರಿ ಕೊಡುವುದೂ ಒಂದು. ನಿನ್ನೆ ಅಲ್ಲ ಮೊನ್ನೆ ಹಾಜರಿಗೆ ಹೋದಾಗ, ಒಂದು ವಿಶೇಷ ಕಾದಿತ್ತು. notice board ಮೇಲೆ "ಯಾರಿವಳು ಬಲ್ಲಿರಾ? " ಎಂಬ ಶೀರ್ಷಿಕೆ ಹೊತ್ತ 6-7 ಸಾಲಿನ ಕವನ ಒಂದಿತ್ತು. ಕೆಳಗೆ,ಕವನ ಯಾರ ಬಗೆಗೆ ಇದೆ ಎಂದು ಸರಿಯಾಗಿ ಊಹಿಸಿದವರಿಗೆ ಬಹುಮಾನವಿದೆ ಎಂಬ note! clue : ಕೊನೆಯ ಸೆಮಿಸ್ಟರ್ ನ ವಿಧ್ಯಾರ್ಥಿನಿ. ಬಂದವರೆಲ್ಲಾ ಓದಿ, ತಮಾಷೆ ಮಾಡಿ, ಅವರಿಗೆ ಸರಿ ಎನಿಸಿದ ಹೆಸರೊಂದನ್ನು ಹೇಳಿ ಹೋಗುತ್ತಿದ್ದರು. ಕನ್ನಡ ಓದಲು ಬಾರದವರು, ಬರುವವರ ಬಳಿ ಓದಿಸಿಕೊಂಡು ಊಹಿಸುವ ಪ್ರಯತ್ನ ಮಾಡುತಿದ್ದರು.
ಎರಡನೇ ದಿನದ ಕವನ ಇಂತಿತ್ತು
ಸಂದರ್ಭ ಸನ್ನಿವೇಶದ ಅರಿವಿರುವ
ಮಾತು ಮೌನದ ತಿಳಿವಿರುವ
ಕಿರಿಯ ಹಿರಿಯರ ಒಲವು ತುಂಬಿದ
ತೂಕ ತಪ್ಪದೆ ನಡಿಯುವ
ಇದ್ದೂ ಇಲ್ಲದಂತಿರುವ
ಪ್ರಕೃತಿಯ ಒಂದಂಶವಾಗಿರುವ
ಈ ಮಾದರಿ ವಿದ್ಯಾರ್ಥಿನಿ ಯಾರು ಬಲ್ಲಿರಾ?
ಯಾರಿದು ಇಷ್ಟೆಲ್ಲಾ ಹೊಗಳಿಕೆ ಗಳಿಸಿದವರು ಎಂದು ಮಾತಾಡುತ್ತಾ, ತಮಾಷೆ ಮಾಡುತ್ತಾ, "ನಾನು! ನಾನು!" ಎನ್ನುತ್ತಾ ಬಂದೆವು. ಮತ್ತೆ ನೋಡಿದರೆ ಅದು ನಾನೇ! ಅರೇ ವಾಹ್! ಮಾದರಿ ವಿದ್ಯಾರ್ಥಿನಿ :) friends ಚೆನ್ನಾಗಿ ಛೇಡಿಸಿದರು , ನಾನೂ ಮಜಾ ತಗೊಂಡೆ .ಖುಷಿನೂ ಆಯ್ತು. (ಸ್ವಲ್ಪ ಅತಿಶಯೋಕ್ತಿ ಆಯ್ತು. ಗೊತ್ತು. ಎಷ್ಟಂದ್ರೂ ಕವನ ಅಲ್ವಾ? )ಅದು ನಿನ್ನೆಗಾಯ್ತು.
ಇವತ್ತು ಸಂಜೆ ಓದುತ್ತ ಕೂತಿದ್ದೆ ( ಹೌದು, internals announce ಆಯ್ತು. ಹಾಗಾಗಿಯೇ ಓದು ಬರಹ ). ಇಬ್ಬರು ಜ್ಯೂನಿಯರ್ ಗಳು ಬಂದು "ಮೇಡಂ, G-17 ಗೆ ಹೋಗಿ ಗ್ರೀಷ್ಮ ನಲ್ಲಿ ಕೇಳಿ ಸಿಹಿ ತಿನ್ನಿ" ಅಂತ ಹೇಳಿದ್ರು ಹಾಗಾಗಿ ಬಂದ್ವಿ ಅಂತೆ. ನಾನು ಒಂದ್ ಸೆಕೆಂಡು ಯೋಚನೆ ಮಾಡಿದೆ. ಆಮೇಲೆ ನೋಡಿದ್ರೆ ನಿನ್ನೆಯ "ಯಾರಿವಳು ಬಲ್ಲಿರಾ" ವಿಜೆತರಿವರು. ನಾಳೆ ಕೊಡುವ ಎಂದು ಹೇಳಿ ಕಳಿಸಿದ್ದಾಯ್ತು. ಎರಡೇ ನಿಮಿಷ! ರೂಮಿನ ಹೊರಗೆ ಒಂದು ದೊಡ್ಡ ಗುಂಪು! ಗಲಾಟೆ, ಮೋಸ ಗ್ರೀಷ್ಮಕ್ಕ ಅಂತ! ನಿನ್ನೆಯ ವಿಜೇತರ ದೊಡ್ಡ ಪಟ್ಟಿಯನ್ನೇ notice board ನ ಮೇಲೆ ಹಾಕಿ, ಬಹುಮಾನಕ್ಕಾಗಿ ರೂಮಿಗೆ ಹೋಗಿ ಅಂತ note ಬೇರೆ! ಅದಕ್ಕೆ ಇಷ್ಟೆಲ್ಲಾ (ಮೇಡಂ ಬಾರಿ ಜಾಣರು, ಬಹುಮಾನ ಅಂತ ಹೇಳಿ, ಕೊನೆಗೆ ಕೊಡುವ ಸಮಯ ಬಂದಾಗ ನಮ್ಮನ್ನ ತೋರಿಸೋದಾ? ) ರಗಳೆ ಮಾಡಿ ಮಾಡಿ ಇಟ್ಟರು. ಕೊನೆಗೆ ಒಂದು chocolate ಗೆ ಒಪ್ಪಿದರು.ಇವತ್ತಷ್ಟೇ ಒಂದು ಪಾಕೆಟ್ eclairs ತಂದಿದ್ದೆ. ಪುಣ್ಯ! ಬಚಾವ್!
ನನ್ನ ಮೇಲೆ ಇಷ್ಟೆಲ್ಲಾ attack ಆಗೋವಾಗ ನನ್ನ ಸ್ನೇಹಿತೆ ಅವರ ಕಡೆ ಸೇರಿ, ಮಜಾ ತಗೋತಾ ಇದ್ಲು. ಹೋಗಿ ನೋಡಿದ್ರೆ, ಇವತ್ತಿನ "ಯಾರಿವಳು" ಅವಳೇ! 8:10 ಕ್ಕೇ ಹನುಮಂತನ ಬಾಲದಷ್ಟು ಉದ್ದ ಪಟ್ಟಿ ರೆಡಿ
ಆಗಿತ್ತು. ನಾಳೆ ಅವಳಿಗಿದೆ ಹಬ್ಬ!
PS: interaction ಗೆ ಮೇಡಂ ಮಾಡಿಕೊಟ್ಟ ಈ ಅವಕಾಶ ಸೂಪರ್! ದಿನಾ ಗಂಟೆ ಎಂಟು ಆಗೊದನ್ನೇ ಕಾಯ್ತಾ ಇರ್ತಿವಿ (ಅವರಿಗೆ ಹಾಜರಿ ಕೆಲಸವು ಸುಲಭ ಆಯ್ತು) . ಧನ್ಯವಾದಗಳು ಮೇಡಂ ಒಳ್ಳೇ farewell gift !

April 25, 2009 at 12:49 PM
ಸೂಪರ್ ಅಲ್ಲೇ ಗ್ರೀಷ್ಮ..
ಮಾದರಿ ವಿದ್ಯಾರ್ಥಿನಿ :-)
Good Good.. Keep it up..
Don't bunk classes now! :-D
April 25, 2009 at 4:05 PM
ಗ್ರೀಷ್ಮ ಮೇಡಮ್,
ನೀವು ಮಾದರಿ ವಿದ್ಯಾರ್ಥಿನಿ ಅಂತ ಗೊತ್ತಾದ ನನ್ನ ಬಾಯಲ್ಲೂ ನೀರೂರಿತು...ಬಿಟ್ಟಿ ಸ್ವೀಟ್ ಸಿಕ್ಕುತ್ತಲ್ಲ ಅಂತ...!
ನಿಮ್ಮ ವಾರ್ಡನ್ ಅದ್ಯಾಪಕಿಯವರದು ತಲೇ ಅಂದ್ರೆ ತಲೇ...ಅವರು ಮಾರ್ಕೆಟಿಂಗ್ ಲೈನ್ ನಲ್ಲಿ ಇರಬೇಕಿತ್ತು...
April 27, 2009 at 12:02 AM
ನಿಮ್ಮ ಹೆಸರಿಗೆ ತಕ್ಕಂತಿದೆ ಕವನ, ನಿಮ್ಮ ಆ ಅಧ್ಯಾಪಕಿ ಬಲು ಜಾಣರು, ಅವರ ಐಡಿಯಾ ಚೆನ್ನಾಗಿದೆ... ತಮ್ಮ ಕವನ ಹಾಗೂ ಕೆಲಸ ಎರಡನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ... ಹಾಗೆ ಒಂದೂವರೆ ವರ್ಷ ನಾವು ಹುಡುಗಿಯ ಹೆಸರಿನಲ್ಲಿ ಪತ್ರ ಬರೆದು ನನ್ನ ಹಾಸ್ಟೆಲ್ ಮೇಟನನ್ನ ಕಾಡಿಸಿದ್ದು ನೆನಪಿಗೆ ಬಂತು... ಅವನೂ ಯಾರಿವಳು ಅಂತ ಅಲೆದದ್ದೇ ಅಲೆದದ್ದು... ಅದೇ ಕಾರಣಕ್ಕಾಗಿ ಅವನು ಚೆನ್ನಾಗಿ ಓದಿ ಡಿಸ್ಟಿಂಕ್ಷನ್ ಪಡೆದ ಅನ್ನೊದು ನಮಗೆ ಹೆಮ್ಮೆ...
May 30, 2009 at 5:41 PM
Maadari Vidhyarthi... Hmmmmm... Namgiva sweetsu..???