Exam ಮುಗೀತು , ರಜಾ ಬಂತು! ಆದ್ರೂ SUMMER HOLIDAYS ಲಿ ಸಿಕ್ತಿದ್ ಅ ಮಜಾ, ಖುಷಿ ಇಲ್ಲ. ಹಾಸ್ಟೆಲ್ ಲಿ ಇದ್ ಓದೋರಿಗೆ ಮನೆಗೆ ಹೋಗಿ ಅಮ್ಮನ ಅಡ್ಗೆ ತಿನ್ನೋದ್ ಅಷ್ಟೆ ಖುಷಿ. ಆಮೇಲೆ ಟಿವಿ ಚಾನೆಲ್ change ಮಾಡದೋ ಕಂಪ್ಯೂಟರ್ ಮುಂದೆ ಕೂತು (ಮಲಗಿ) message ಮಾಡ್ತಾ ಸಿನಿಮಾ ನೋಡದೋ .. ಹಿಂಗೆ ಸೋಮಾರಿತನದ ಪರಮಾವಧಿ reach ಆಗೋ ಕೆಲಸ.( ನಿಮ್ ಹತ್ರ ಬೇರೆ ಏನಾದ್ರೂ ಟೈಮ್ ಪಾಸು ಮಾಡೋ ideas ಇದ್ರೆ ನಂಗು ಹೇಳಿ. 6 sem ಇಂದ ಇದೇಮಾಡಿ ಮಾಡಿ ಬೋರ್ ಆಗಿದೆ :( )
ಮುಂಚೆ ಚೆನಾಗಿರೋದು.. ರಜಾ ಬಂದ್ ಕೂಡ್ಲೇ ಅಜ್ಜಿ ಮನೆಗ್ ಹೋಗೋದು.. ಎಲ್ಲಾ ಮಕ್ಳು ಸೇರಿ ಊರ್ ಇಡೀ ದಾಂದಲೆ ಎಬ್ಸೋದು!! ಬೆಳಿಗ್ಗೆ ತಿಂಡಿ ಕಾರ್ಯಕ್ರಮ ಮುಗ್ಸಿ ಗುಡ್ಡ-ಬೆಟ್ಟ ಅಲಿಯೋದು..ಸಳ್ಳೆ ಹಣ್ಣು ಕಿತ್ತು, ನೇರಳೆ ಹಣ್ಣು- ಮಾವಿನ್ ಹಣ್ಣು ಹೆಕ್ಕಿ, ಕವಳಿ ಮಟ್ಟಿಗೆ ಕೈ ಹಾಕಿ ಮುಳ್ಳು ಚುಚ್ಸ್ಕೊಂಡು , ಅಂಗಿ ಎಲ್ಲಾ ಕಲೆ ಮಾಡ್ಕೊಂಡು ತಿನ್ನೋದು! (ಬಾಯಲ್ ನೀರ್ ಬರ್ತಿದೆ ) ಮಧ್ಯಾಹ್ನ ಎಲ್ಲಾರೂ ಪಂಕ್ತಿ ಲಿ ಊಟ ಮಾಡದು, ಬೈಸ್ಕೊಂಡ್ ಮಲಗೋ ನಾಟಕ ಮಾಡೋದು, ದೊಡ್ಡೋರ್ ನಿದ್ದೆ ಮಾಡಿದ ಮೇಲೆ ನಿಧಾನಕೆ ತೋಟಕ್ escape ಆಗೋದು! ಹೋಗಕ್ಕು ಮುಂಚೆ ಹಿತ್ಲಲ ಇರೋ ಸೌತೆ ಕಾಯಿ ಕಿತ್ಕೊಂಡ್ ಹೋಗದು, ತೋಟದಲ್ ಸಂಕದ ಮೇಲ್ ಕೂತು ಉಪ್ಪು ಖಾರ ಹಾಕಕ್ಕೆ! ಆಹಾ! ಹಂಗೆ ಕಿತ್ತಾದ್ಕೊಂಡ್ ತಿನ್ನಕ್ಕೆ ಮಜಾ! ಹೊಳೇಲಿ ಮೈ ಇಡೀ ಒದ್ದೆ ಆಗೊಹಂಗ್ ಆಡ್ತಿದ್ವಿ , ಮನೆಗ್ ಹೋದಮೇಲೆ ಬೈಗಳ ಸಿಗದೆ ಇರ್ಲಿ ಅಂತ ಅಲ್ಲೇ ಬಿಸಿಲಲ್ಲಿ ಬಟ್ಟೆ ಒಣಗೋ ತನಕ ಕುಣಿತಿದ್ವಿ:) ಕೈ ಕಾಲ್ ತೊಳಿಯೊವಾಗ ಮೈ ಕೈಲಿ ಆಗಿರೋ ಗಾಯಗಳು "hi, hello" ಹೇಳಕ್ ಶುರು ಮಾಡೋದು! ಮನೇಲ್ ಹೇಳೋಹಂಗ್ ಇಲ್ಲ ಬಿಡೋ ಹಂಗ್ ಇಲ್ಲ. ಬಿಸಿ ತುಪ್ಪದ್ ಸಂಕಟ! ಇದ್ಕು ದೊಡ್ಡ ಸಂಕಟ ಅಂದ್ರೆ ಊಟಕ್ ready ಆಗೋ ತನಕ ಭಜನೆ ಹೇಳೋದು, ಮಗ್ಗಿ ಹೇಳೋದು, holiday homework ಮಾಡದು :( ಆಮೇಲ್ ಹೊಟ್ಟೆ ತುಂಬ ಬಿಸಿ ಬಿಸಿ ಊಟ, ಸಾಲಾಗ್ ಮಲಗಿ ನೆಮ್ಮದಿಯ ನಿದ್ದೆ :)ಈಗ ನಾವು ಮಕ್ಳ್ ಅಲ್ಲ, summer ಲಿ holidays ಉ ಸಿಗಲ್ಲ, ಜನ ಒಟ್ಟಿಗೆ ಪುರ್ಸೋತ್ತಲ್ ಸೇರದು ಇಲ್ಲ.. ಹಿಂಗೆ sem holidays ಲಿ " आजा बचपन एक बार फिर , देदे अपनी निर्मल शान्ति " ಅನ್ಕೊಂಡು ಕವನನೋ , article ಓ ನನ್ ಥರ blog ಲಿ ಬರಕೊಂಡು time spend ಮಾಡೋದ್ ಅಷ್ಟೆ :(

January 22, 2009 at 4:05 PM
Kannadalli comment bariyo facility innu blogspot avru kottilla.. idre innu chennagi irodu.
So antu nam Greeshma blog bardlu, voLLe topicanna select maadkondiddaLe bere..heLiro kathe noDidre,sakkat Pokri hudgi anta guarantee aitu.. ತಿನ್ನೋದ್,ಊರ್,ತೋಟಕ್,ತುಪ್ಪದ್ taraddu words use maadiddaLe,chennagide, typical,ivLu maatado stylu hinge iratte..hilarious aagi bardiddaLe.
voLLE blog to start with,innu bartaa irli, nam shubha haaraike iratte..:)
January 22, 2009 at 4:26 PM
haha! thanks bharat :)
aag ee mangaata ella routine aagittu. nenp maaDkoLak maja aagatte :)
January 22, 2009 at 10:50 PM
ಅಪ್ಪೇ ಗ್ರೀಷ್ಮಾ, ಅಂದು ತುಂಬಾ ಮಜಾ ಇತ್ತು.
ಬೀchi ಬರೆದ್ದು ಕಾಣ್ತು, " ಬಾಲ್ಯಕ್ಕಿಂತ ಅದರ ನೆನಪೇ ಚೆನ್ನ" ಹೇಳಿ. ಓದಿದರೆ ಅದುದೇ ನಿಜ ಹೇಳಿ ಅನ್ಸುತ್ತು, ಅಲ್ದಾ?
January 23, 2009 at 10:30 AM
@ಜ್ಯೋತಿ
ಸತ್ಯ "ಬಾಲ್ಯಕ್ಕಿಂತ ಅದರ ನೆನಪೇ ಚೆನ್ನ".
ಹಿಂಗೆ "Student life is golden life" ಅಂತ ಅರಿವಾಗೋ ಕಾಲನೂ ಬರ್ತಾ ಇದೆ :(
February 17, 2009 at 10:39 PM
Dos times make us Nostaglic
February 18, 2009 at 4:00 PM
ಬಾಲ್ಯದ ನೆನಪುಗಳು ಯಾವತ್ತೂ ಸಿಹಿ.. ಲೇಖನ ಚೆನ್ನಾಗಿದೆ ... ಬಲ್ಲ್ಯದ ದಿನಗಳು ನೆನಪಾದವು..
http://ravikanth-gore.blogspot.com
March 23, 2009 at 7:53 AM
Welcome to blogworld Greeshma!
ನಿಮ್ಮ ಬಾಲ್ಯದ ಅನುಭವಗಳು ನನ್ನ ಬಾಲ್ಯವನ್ನು ನೆನಪಿಸಿತು. ನನ್ನ ಕಸಿನ್ಸುಗಳು ಬೇರೆ ಊರಿನಿ೦ದ ರಜೆಗೆ ನನ್ನ ಹಳ್ಳಿಗೆ ಬರುತ್ತಿದ್ದರು ಮತ್ತು ನಾವು ಊರೆಲ್ಲಾ ದಾ೦ಧಲೆ ಎಬ್ಬಿಸುತ್ತಿದ್ದೆವು. ಈಗೆಲ್ಲಾ ಇವು ಬರೇ ನೆನಪುಗಳಷ್ಟೇ... ಹೀಗೆ ಬರೆಯುತ್ತಿರಿ.