ನಾನು ಆಸೆ ಮಾಡದು ನೋಡಿ ಇನ್ನೊಂದ್ ಕ್ಯಾಮೆರ ತಗೋ ಅಂದ್ರು ಅಮ್ಮ ಅಪ್ಪ. ಖುಷಿ ಆಯ್ತು. ಈ ಸಲ sony cybershot W220 ತಂದೆ. ಮತ್ತೆ ಶುರು ಆಯ್ತು ನಂದು photo shoots :) ಕಾಲೇಜು campus ಲಿ ಇರೋ ಎಲ್ಲಾ ಗಿಡ ಮರಗಳು, ಹೂವುಗಳ photo ತೆಗ್ದಿದ್ದೆ. ಎರಡೇ ವಾರದಲ್ಲಿ ಕಳದು ಹೋಯ್ತು ಕ್ಯಾಮೆರ. ಗ್ರಹಚಾರ ಅಂದ್ರೆ ಇದೆ ಅನ್ಸತ್ತೆ. ತುಂಬಾ ಆಸೆ ಮಾಡಿದ್ರೆ ಹಿಂಗೆ ಅನ್ಸತ್ತೆ. ಬೇಜಾಬ್ದಾರಿ ಅಲ್ಲ ಅದು, ಗ್ರಹಚಾರವೇ!
ಇದಾದಮೇಲೆ ಕ್ಯಾಮೆರ ಆಸೆ ಬಿಟ್ಟಿದ್ದೆ ಹಾಗಂತ photography ಹುಚ್ಚು ಬಿಟ್ಟಿರಲಿಲ್ಲ. ಅವ್ರ ಇವರ ಕ್ಯಾಮೆರ ತಗೊಂಡು ಅದ್ರಲ್ಲಿ ಹೊಡಿತಾ ಇದ್ದೆ. ಇತ್ತೀಚಿಗೆ ಅಪ್ಪನಿಗೆ ಕ್ಯಾಮೆರ gift ಆಗಿ ಸಿಕ್ತು.Samsung ಕ್ಯಾಮೆರ. ಫೋಟೋ ತೆಗಿಬಹುದು ಅಷ್ಟೇ. ಏನ್ ಮಹಾ adjustmentsu ಇಲ್ಲ. ನಾನು ಬಾಯಿ ಬಿಡೋದು ನೋಡಿ, ಅಪ್ಪ ತಗೊಂಡ್ ಹೋಗು ಅಂತ ಕೊಟ್ರು. Something is better than nothing ಅಂತ ತಗೊಂಡ್ ಬಂದೆ. ಅದನ್ನು ಎಲ್ಲಾ ಕಡೆ ಹಿಡ್ಕೊಂಡ್ ಹೋಗ್ತಿದ್ದೆ. ಬೇರೆಯವರ ಕುತ್ತಿಗೆ ಲಿ ದೊಡ್ಡ ದೊಡ್ಡ ಕ್ಯಾಮೆರ ನೋಡ್ದಾಗ, ಅವ್ರು view finder ಇಂದ ನೋಡೋವಾಗ, lens adjust ಮಾಡೋವಾಗ ಎಷ್ಟ್ ಆಸೆ ಆಗ್ತಿತ್ತು! ಯಾವ ಮಾಡೆಲ್ ಅಂತ ಇಣುಕಿ ನೋಡಿ, internet ಲಿ ಅದರ ಬಗ್ಗೆ ಓದಿ, ಹೊಟ್ಟೆ ಉರ್ಕೊತಿದ್ದೆ. ಇಣುಕೊದಕ್ಕೆ ಆಗದೇ ಹೋದಾಗ, ಅವರ ಹತ್ರನೇ ಹೋಗಿ ಕೇಳಿದ್ದೂ ಇದೆ.
Afford ಮಾಡೋದಕ್ಕೆ ಆಗಲ್ಲ ಅಂತ ಅಲ್ಲ, ಪುನಃ ಕ್ಯಾಮೆರ ತಗೊಳದಕ್ಕೆ ಭಯ. ನಂಗು ಅದಕ್ಕೂ ಆಗ್ ಬರೋದೆ ಇಲ್ವೇನೋ ಅಂತ ಮನಸ್ಸಿನಲ್ಲಿ ಕೂತು ಹೋಗಿತ್ತು. ಬೇರೇ ಯಾರದ್ದಾದರೂ ಕ್ಯಾಮೆರ photo ತೆಗಿಲಿಕ್ಕಾಗಿ ತಗೊಂಡರೂ , ತಕ್ಷಣ ವಾಪಾಸು ಮಾಡ್ತಿದ್ದೆ. ಅಷ್ಟು ಭಯ ಹತ್ತಿ ಹೋಗಿತ್ತು. ಹಾಗಾಗಿನೇ ಸಂಬಳ ಬರ್ತಾ ಒಂದು ವರ್ಷದ ಮೇಲೆ ಆದ್ರೂ ಸಹ ನಾನು ಅಷ್ಟು ಆಸೆ ಮಾಡೋ ವಸ್ತು ತಗೊಂಡಿರಲಿಲ್ಲ. ನಾಕ್-ಐದು ಸಲ ಇನ್ನೇನು ತಗೊಂಡೇ ಬಿಡದು ಅಂತ ಅಂದುಕೊಂಡು research ಮಾಡಿ, ಬಿಟ್ಟಿದ್ದು ಇದೆ.
ಮೊನ್ನೆ ಅದೇನಾಯ್ತೋ ಗೊತ್ತಿಲ್ಲ. 9 ದಿನ ಆಫಿಸಿಗೆ ರಜೆ, ಮನೆಗೆ ಹೋಗೋದು, ಅಲ್ಲಿಂದ ಒಂದ್ ಎರಡು ದಿನ ಅಜ್ಜಿ ಮನೆಗೆ ಅದು ಇದು ಅಂತ plan ಆಯ್ತು. ಈ ರಜೆಲಿ ಕ್ಯಾಮೆರ ಇದ್ದಿದ್ದರೆ ಎಷ್ಟು ಮಜಾ ಆಗ್ತಿತ್ತು ಅಂತ ಕನಸು ಕಾಣ್ತಾ ಇದ್ದೋಳು, ಎದ್ದು ಯಾವ ಕ್ಯಾಮೆರ ಅಂತ ಹುಡುಕಿ, ಒಂದಿಷ್ಟು ಅಂಗಡಿಗೆ phone ಮಾಡಿ, price compare ಮಾಡಿ,ಅಪ್ಪನಿಗೆ ಹೇಳಿ,decide ಮಾಡಿ, ನೆಮ್ಮದಿ ಇಂದ ಮಲ್ಕೊಂಡೆ :)
ಬೆಳಿಗ್ಗೆ ಅಮ್ಮನಿಗೆ ಹೇಳೋಣ ಅಂತ phone ಮಾಡ್ದಾಗ ಸಣ್ಣಕೆ ಒಂದು ಜಗಳ ಆಡಿ, ಬೇಜಾರ್ ಮಾಡ್ಕೊಂಡೆ. ಮಧ್ಯಾಹ್ನ ಅಪ್ಪ "ಅಮ್ಮನ ಹತ್ರ ನಾನು ಮಾತಾಡ್ತೀನಿ, ನೀನ್ ಕ್ಯಾಮೆರ ತಗೊಂಡ್ ಬಾ!" ಅಂದ್ರು :) ಸಂಜೆ ಹೋಗಿ Canon EOS 1000D ತಂದೆ :)
ಮಾರನೇ ದಿನ ಮನೆ! ಅಪ್ಪ, ಅಮ್ಮ, ತಮ್ಮ ಕಾಯ್ತಾ ಇದ್ರು ಹೊಸ ಕ್ಯಾಮೆರ ನೋಡೋದಕ್ಕೆ. ಬೆಳಿಗ್ಗೆ 6 ಘಂಟೆ ಇಂದ ನೇ ಶುರು photo ಹೊಡಿಯೋದಕ್ಕೆ! photo quality ನೋಡಿ ಎಲ್ಲರೂ ದಂಗು! ಅಮ್ಮನಿಗೆ ಆಗ ಅರ್ಥ ಆಯ್ತು 22 ಸಾವಿರ ಯಾಕೆ ಕೊಟ್ಟಿದ್ದು ಅಂತ :) ತಮ್ಮನಿಗೆ ಕ್ಯಾಮೆರಕ್ಕಿಂತ ಫ್ರೀ ಬಂದ watch ನೋಡಿ ಸಂತೋಷ ಆಯ್ತು :)
ರಜೆ ಲಿ ಪೂರ ಇದೇ ಕೆಲಸ, manual ಓದೋದು, photo ತೆಗಿಯೋದು! ಎರಡು ದಿನ ಅಜ್ಜಿ ಮನೆಗೆ ಹೋಗಿ ತೋಟ, ಗದ್ದೆ, ಹೂವು ಹಣ್ಣು ಸಿಕ್ಕಿದೆಲ್ಲ capture ಮಾಡ್ಕೊಂಡು ಬಂದೆ . ಕೆಲಸಕ್ಕೆ ಬಂದೋರನ್ನ ನಿಲ್ಸಿ, pose ಕೊಡೋದಕ್ಕೆ ಹೇಳಿ , portrait ತೆಗಿಯೋದು ಅಭ್ಯಾಸ ಮಾಡ್ದೆ(ಇನ್ನು ಯಾವದೇ ಮದುವೆ ಮುಂಜಿ ಆದ್ರೂ ನಿನ್ನನ್ನೇ ಕರಿಯೋಣ ಅಂತ ಊರೋರೆಲ್ಲ ತಮಾಷೆ ಮಾಡ್ತಾ ಇದ್ರು) .ಅದೆಲ್ಲಾ print ಹಾಕ್ಸಿ ಅವ್ರಿಗೆ ಕಳುಹಿಸಿದಿನಿ . reaction ಗೆ ಕಾಯ್ತಾ ಇದೀನಿ :)
ದೀಪಾವಳಿಯ ಹಾರ್ದಿಕ ಶುಭಾಶಯಗಳು :)
ಕ್ಯಾಮೆರ ನನ್ನ ಜೋತೆಲೇ ಇರ್ಲಿ ಅಂತ ಹಾರೈಸಿ!
ದೀಪಾವಳಿಯ ಬೆಳಕಿನ photos ಹೇಗೆ ತೆಗೊಯೋದು ಅಂತ manual ಓದಿ, ಸಂಜೆಗೆ ತಯಾರಾಗಬೇಕಲ , ಬರ್ತೀನಿ, bye!
`
November 5, 2010 at 8:43 PM
good good!! ee camera jaagrateyaagi itka marayti! :)
November 5, 2010 at 8:56 PM
ಈ ಸಾರಿ ಕ್ಯಾಮರಾ ನಿಮ್ಮ ಬಿಟ್ಟು ಹೋಗಲ್ಲ. ದೀಪಾವಳಿಯ ಫೋಟೋಗಳಿಗಾಗಿ ಕಾಯ್ತಾ ಇದ್ದೀವಿ.
November 9, 2010 at 12:00 PM
gud luck!
November 9, 2010 at 3:03 PM
camera kathe channaagide..... jaagrathe..!!
November 9, 2010 at 11:44 PM
ಎಷ್ಟೊಂದು ಕ್ಯಾಮೆರಾ ಕಳೆದು ಹೋಯ್ತು..?? :( ಈ ಸಾರಿನು ಹಾಗೆ ಆಗಬಾರದು ಅಂತಿದ್ರೆ ಕ್ಯಾಮೆರಾ ನನ್ ಕೈಗೆ ಕೊಡಿ.. ಜೋಪಾನವಾಗಿ ಇಟ್ಕೋತಿನಿ.. :) ಹಿಹಿಹಿ..
ನಂಗೂ ಕ್ಯಾಮೆರಾದ ಹುಚ್ಚು ಅಷ್ಟಿಷ್ಟಲ್ಲ.. ಕೊನೆಗೂ ಕಾಲ ಕೂಡಿಬಂದಿದ್ದು ನಾಕು ತಿಂಗಳ ಹಿಂದೆ.. ಅದ್ಕೆ ನನ್ ಬ್ಲಾಗ್ ಗಳಲ್ಲಿ ಈಗೀಗ ಫೋಟೋ ಗಳದ್ದೇ ಕಾರುಬಾರು.. ನಂಗೆ ಫೋಟೋಗ್ರಫಿ ಬಗ್ಗೆ ಮಣ್ಣಾಂಗಟ್ಟಿ ಏನೂ ಗೊತ್ತಿಲ್ಲಾಂದ್ರು ಅದೇನೋ ಮಜಾ ಅದ್ರಲ್ಲಿ..
November 16, 2010 at 8:03 PM
ಕ್ಯಾಮೆರಾ ಕಥೆ ಚೆನ್ನಾಗಿದೆ..ಸದ್ಯ ನಾನು ಈಗ ರಾತ್ರಿ ಸಿರಸಿಗೆ ಹೋಗುತ್ತಿದ್ದೇನೆ. ಕ್ಯಾಮೆರಾವನ್ನು ಮರೆಯದೇ ತೆಗೆದುಕೊಂಡು ಹೋಗುತ್ತಿದ್ದೇನೆ..ಸೊಗಸಾದ ಲೇಖನಕ್ಕೆ ಥ್ಯಾಂಕ್ಸ್.
December 1, 2010 at 11:16 PM
@karthik
hu! e sala nande duDDu,samaaa jaagrate maaDadeya!
@Mahesh, Sreenidhi anna
Thanks
@chukki chittara
maaDtene!
@ರವಿಕಾಂತ sir
ಹೌದು..ಫೋಟೋ ತೆಗಿಯೋದು ಮಜಾ, ಸುಮಾರ್ ದಿನ ಆದಮೇಲೆ ಕೂತುಕೊಂಡು ನೋಡೋದಕ್ಕೆ ಇನ್ನೂ ಮಜಾ!
@ಶಿವೂ sir
ತಿರುಗಾಟಕ್ಕೆ ಹೋಗೋವಾಗ ಕ್ಯಾಮೆರ ಇದ್ರೆ ಬೇಜಾರೇ ಆಗಲ್ಲ ಅಲ್ವ?
ನಾನೂ ಸಾಧಾರಣವಾಗಿ ಕ್ಯಾಮೆರನ ಮರೆಯೋದಿಲ್ಲ
November 4, 2011 at 8:32 PM
November 4, 2011 at 8:34 PM
November 27, 2011 at 11:04 AM
Congrats on the new cam.
Chenda maadi itka idanna. :)
Will be looking forward for more pics in the blog/ fb page soon :)